ಸುದ್ದಿ ಕನ್ನಡ ವಾರ್ತೆ

ಪ್ರಸಕ್ತ ಸಾಲಿನಲ್ಲಿ ಜೋಯಿಡಾ ತಾಲೂಕಿನ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಹಲವು ಸೌಲಭ್ಯಗಳು, ಸಿಗಲಿದ್ದು ಅರ್ಹ ರೈತರು ಇದರ ಪ್ರಯೋಜನ ಪಡೆಯಲು ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿಗಳು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ,

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ವಿವಿಧ ತರಕಾರಿ ಬೆಳೆಗಳಿಗೆ, ಕಾಳು ಮೆಣಸು, ದಾಲಚಿನ್ನಿ,ಬೆಳೆಗಳ ಪುನ್ಸ್ಚೇತನ ನೀರಿನ ತೊಟ್ಟಿ,ಅಡಿಕೆ ತೋಟಕ್ಕೆ ಪ್ಲಾಸ್ಟಿಕ್ ಮುಚ್ಚುಗೆ, ಸೇರಿದಂತೆ, ವಿವಿಧ ಪ್ರಕಾರ ಗಳಿವೆ ಅದೇರೀತಿ ಎಸ್ ಎಂ ಎ ಎಂ ಯೋಜನೆಯ ಅಡಿಯಲ್ಲಿ, ಜೇನುಪೆಟ್ಟಿಗೆ , ಜೇನು ತುಪ್ಪ ತೆಗೆಯುವ ಯಂತ್ರ, ವಿವಿಧ ಯೋಜನೆ ಗಳಲ್ಲಿ ತೋಟಗಾರಿಕೆಯ ವಿವಿಧ ಸಲಕರಣೆ, ನೀರಾವರಿ, ನೀರಿನ ಸಂಗ್ರಹಾಲಯ, ಸೇರಿದಂತೆ ಅನೇಕ ಯೋಜನೆಗಳಿದ್ದು ರೈತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದು ಕೊಳ್ಳ ಬಹುದಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿ ಗಳು ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ ಎಂದು ಪ್ರಕಟಿಸಲಾಗಿದೆ