ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನಲ್ಲಿ ಯಾವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲೂ. ಕುಡಿಯುವ ನೀರಿನ ತೊಂದರೆ ಜನತೆಗೆ ಆಗಬಾರದು ಎಂದು ಶಾಸಕರು ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆ ಹೇಳಿದರು. ಅವರು ಜೋಯಿಡಾ ಕಾಲೇಜು ಸಭಾಂಗಣ ದಲ್ಲಿ ಶುಕ್ರವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಿದ್ದರು.

ಜೋಯಿಡಾ ದಲ್ಲಿ ಕಳೆದ ಮೂರು ವರ್ಷ ಗಳಿಂದ ಕುಡಿಯುವ ನೀರು ಯೋಜನೆಯ ಕೆಲಸ ಮಾಡುತ್ತಿದ್ದ ಗುತ್ತಿಗೆ ದಾರ ಕೆಲಸ ಮುಗಿಸದೆ, ನಾಪತ್ತೆ ಆಗಿದ್ದು ಅವನಿಗೆ ಶೋಕಾಸ್ ನೋಟಿಸ್ ನೀಡಲು ಸೂಚಿಸಿದರು.ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮೂರು ದಿನದೊಳಗೆ ಸಭೆ ನಡೆಸಿ ಮಾಹಿತಿಯನ್ನು ನೀಡಲು ತಹಸೀಲ್ದಾರ ಮಂಜುನಾಥ್ ಮುನ್ನೊಳ್ಳಿ ಅವರಿಗೆ ಸೂಚಿಸಿದರು.ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕೆಲಸ ಕೈಕೊಳ್ಳದೆ ಜನಪ್ರತಿನಿದಿನಗಳು ಶಾಸಕರು ಗಳ ಗಮನಕ್ಕೆ ತಂದು ಕ್ರಮ ಕೈಕೊಳ್ಳಲು ಸೂಚಿಸಿದರು.ಜಿಲ್ಲಾಧಿಕಾರಿ ಗಳಿಗೆ ದೂರವಾಣಿ ಕರೆಮಾಡಿ ಕುಡಿಯುವ ನೀರಿನ ಮಾಹಿತಿ ನೀಡಿದರು. ನಂದಿಗದ್ದೆ ಗ್ರಾಮ ಪಂಚಾಯತ ದ ಬಳಗಾರ ಮತ್ತು ಶೇವಾಳಿ ಯಲ್ಲಿ ಕುಡಿಯುವ ನೀರಿನ ಯೋಜನೆಯ ಬಗ್ಗೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಅರುಣ ದೇಸಾಯಿ ಹೇಳುತ್ತಿದ್ದಂತೆ ತಹಸೀಲ್ದಾರ ರವರಿಗೆ ಕ್ರಮ ಕೈಕೊಳ್ಳಲು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಅಧಿಕಾರಿ ಗಳನ್ನೇಜವಾಬ್ದಾರಿ ಗಳನ್ನಾಗಿಮಾಡಲಾಗುವದು ಎಂದರು. ಆರೋಗ್ಯ ಇಲಾಖೆಯಲ್ಲಿ 14 ರಿಂದ 15 ವರ್ಷ ದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭ ಕೋಶ ದಲ್ಲಿ ಬರುವ ಕ್ಯಾನ್ಸರ್ ತಡೆ ಗಟ್ಟುವ ಉಚಿತ ಚುಚ್ಚು ಮದ್ದು ಬಂದಿದ್ದು ಎಲ್ಲ ಹದಿನಾಲ್ಕು ಮತ್ತು ಅದಿನೈದರ ಹೆಣ್ಣುಮಕ್ಕಳು ಪ್ರಯೋಜನ ಪಡೆಯಲು ಎಲ್ಲರೂ ಪ್ರಯತ್ನಿಸಲು ದೇಶಪಾಂಡೆ ಅವರು ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಸೂಚಿಸಿದರು. ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸುವ ಮೊದಲು, ತಮ್ಮ ಕ್ಷೆತ್ರದಲ್ಲಿ ಸ್ವಚ್ಛತೆ ಯನ್ನು ಎಲ್ಲರೂ ಪಾಲಿಸಬೇಕು ಮತ್ತು ಕ್ಷೆತ್ರವನ್ನು ಸ್ವಚ್ಛ ವಾಗಿಡಬೇಕು ಎಂದು ಕರೆನೀಡಿ ದಾಗ ಎಲ್ಲರೂ ಭಾಗವಹಿಸಿ ನನ್ನೊಂದಿಗೆ ಸ್ವಚ್ಛತೆ ಯಲ್ಲಿ ಭಾಗವಹಿದ್ದಕ್ಕೆ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು, ಮುಂದೆ ಕೂಡ ಪರಿಸರದ ಆರೋಗ್ಯ ನಿಮ್ಮ ಆರೋಗ್ಯ ಉತ್ತಮ ವಾಗಿರಲು ವರ್ಷದಲ್ಲಿ ನಾಲ್ಕು ಬಾರಿ ಯಾದರೂ, ನಿಮ್ಮ ಸುತ್ತ ಮುತ್ತಲು ಸ್ವಚ್ಛ ವಾಗಿಡಿ ಎಂದರು. ಕಂದಾಯ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು, ಸ್ವಚ್ಛತಾ ಕಾರ್ಯಕ್ರಮ ದ ಬುಕ್ ಲೆಟ್ ನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು