Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಮೈನೋಳ ಗ್ರಾಮದ ಶ್ರೀ ರಾಮಲಿಂಗ ದೇವರ ವಾರ್ಷಿಕೋತ್ಸವ ದಿನಾಂಕ:26-03-2026 ರ ಗುರುವಾರದಂದು ಯಶಸ್ವಿ ಸಂಪನ್ನಗೊಂಡಿತು.

Banner Ad

ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ ಶ್ರೀ ರಾಮಲಿಂಗ ದೇವರ ಮಹಾಅಭಿಷೇಕ,ಪೂಜೆ ಪ್ರಸಾದ ವಿತರಣೆ ನಡೆಯಿತು. ಉಪಸ್ಥಿತರಿದ್ದ ಹೆಚ್ಚಿನ ಸಂಖ್ಯೆಯ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು. ರಾತ್ರಿ10:00 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10:00 ಗಂಟೆಗೆ ಶ್ರೀ ದೇವರ ಫಲಾಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಿತು.ಭಕ್ತರ ವಿಶೇಷ ಮನರಂಜನೆಗಾಗಿ ರಾತ್ರಿ12:00 ಗಂಟೆಗೆ ಶ್ರೀ ರಾಮಲಿಂಗ ತರುಣ ನಾಣ್ಯ ಮಂಡಲದ ಮೈನೋಳ ಕಲಾವಿದರಿಂದ ಅರ್ಪಿಸಿದ ಶ್ರೀ ಗಣೇಶ ಹಿರ್ಲೇಕರ ವಿರಚಿತ ಜ್ವಾಲಾಮುಖಿ ಸಾಮಾಜಿಕ,ಹೃದಯಸ್ಪರ್ಶಿ,ಸಂಗೀತ, ‘ರಕ್ತಿಮಾ’ ಎಂಬ ಮರಾಠಿ ನಾಟಕದ ಪ್ರದರ್ಶನ ಜನಮನ ರಂಜಿಸಿತು.ಈ ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀ ರಾಮಲಿಂಗ ದೇವಸ್ಥಾನ ಸಮಿತಿ,ಊರ ನಾಗರೀಕರು ಮೈನೋಳ ಸಹಕಾರ ನೀಡಿದರು.

Banner Ad