ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ತಾರಗಾರ- ಬೀಗಾರ-ಬಾಗಿನಕಟ್ಟಾ ರಸ್ತೆಯ ಪಕ್ಕ ಭೂ ಕುಸಿತ ಉಂಟಾದ ಸ್ಥಳಕ್ಕೆ ತಹಸೀಲ್ದಾರ ಚಂದ್ರಶೇಖರ ಹೊಸಮನಿ ಅವರು
ಕಂದಾಯ ನಿರೀಕ್ಷಕರು, ಲೋಕೋಪಯೋಗಿ ಇಲಾಖೆಯ ಇಂಜನಿಯರ್, ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಜೊತೆಗೆ
ಭೇಟಿ ನೀಡಿದರು. .ಭೂಕುಸಿತದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು.
ಈ ಹಿಂದಿನ ವರ್ಷಗಳಲ್ಲಿ ಭೂಕುಸಿತ ಉಂಟಾದ ಸ್ಥಳದ ಹತ್ತಿರದಲ್ಲೇ ಈ ಬಾರಿಯೂ ಭೂಮಿ ಕುಸಿದಿದೆ. ಮಳೆ ಮುಂದುವರಿದಲ್ಲಿ ಇನ್ನಷ್ಟು ಭೂಕುಸಿತ ಉಂಟಾಗುವ ಅಪಾಯವಿದೆ.ಹಿನ್ನೆಲೆಯಲ್ಲಿ ತಾರಗಾರ ಬೀಗಾರ-ಬಾಗಿನಕಟ್ಟಾ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸಬೇಕು. ವಾಹನಗಳ ಸಂಚಾರ ನಿಷೇಧದ ಕುರಿತು ಮಾಹಿತಿಗಾಗಿ ಸೂಚನಾ ಫಲಕ (ಬ್ಯಾನರ್) ಅಳವಡಿಸಬೇಕು ಎಂದು ಸೂಚಿಸಿದ ಅವರು ಹೆಚ್ಚಿನ ಮಳೆ ಇದ್ದಾಗ ಎಲ್ಲಾ ವಾಹನಗಳೂ ಬಾಗಿನಕಟ್ಟಾ-ಚಿಮನಳ್ಳಿ-ತೇಲಂಗಾರ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಲು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.