ಸುದ್ದಿ ಕನ್ನಡ ವಾರ್ತೆ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ನಡೆಸುವ ಯಕ್ಷ ಶಾಲ್ಮಲಾ ನೀಡುವ ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಯನ್ನು ಯಕ್ಷಗುರು, ಮದ್ದಲೆವಾದಕ ಯಲ್ಲಾಪುರ ಗಣಪತಿ ಭಾಗವತ್ ಕವ್ವಾಳೆ ಅವರಿಗೆ , ದಿ.ಎಂ.ಎ.ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಯಕ್ಷಗಾನ ಕವಿ ಮೃತ್ಯುಂಜಯ ಗಿಂಡಿಮನೆ ಅವರಿಗೆ ಪ್ರಕಟಿಸಲು ತೀರ್ಮಾನಿದೆ.
ಸ್ವರ್ಣವಲ್ಲೀಯಲ್ಲಿ ಎರಡು ದಿನಗಳ ಯಕ್ಷೋತ್ಸವದ ಮೊದಲ ದಿನ ಆ.೨೩ಕ್ಕೆ ಹೊಸ್ತೋಟ ಪ್ರಶಸ್ತಿ, ೨೪ಕ್ಕೆ ದಂಟ್ಕಲ್ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯಕ್ಷ ಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ತಿಳಿಸಿದ್ದಾರೆ.