ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಮುರ್ಡೇಶ್ವರ ದೇವಸ್ಥಾನದ ಫೋಟೋವನ್ನು ಬಳಸಿಕೊಂಡು ಲಕ್ಕಿಡ್ರಿಪ್ ಮಾಡುತ್ತೇವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮ್ಯನೇಜರ್ ಮಂಜುನಾಥ ಶೆಟ್ಟಿ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾರೋ ಆರೋಪಿತರು ಮೊಬೈಲ್ ನಂ.೮೩೦೬೨೪೬೭೫೦ ಬಳಸಿಕೊಂಡು ಮಾ.೮ ರಿಂದ ಇಲ್ಲಿಯ ತನಕ ದೇವಸ್ಥಾನದ ಫೋಟೋ ಬಳಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿಯನ್ನು ಸಾಮಾಜಿ ಜಾಲ ತಾಣದಲ್ಲಿ ತನ್ನ ಬಾಬ್ತು ಸಾಮಾಜಿಕ ಜಾಲ ತಾಣ ಐಡಿ ಇನ್ಸ್ಟಾಗ್ರಾಮನಲ್ಲಿ ನವೀನ್ ಅಂಡರ್ಸ್ಕೋರ್ ಬಿಆರ್ ಎಂತಾ ಮಾಡಿಕೊಂಡು ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ ಅಂತಾ ಪಾಂಪ್ಲೆಟ್ಗಳನ್ನು ಹರಿ ಬಿಟ್ಟು ನಕಲಿ ಲಾಟರಿ ಟಿಕೆಟ್ ಮೂಲಕ ರೂ.೨೯೯ ರಂತೆ ಸಂಗ್ರಹಿಸಿರುತ್ತಾನೆ. ಆನ್ಲೈನ್ ಟೋಕನ್ ವ್ಯವಸ್ಥೇಯನ್ನು ಕೂಡಾ ಮಾಡಿಕೊಂಡು ಮೋಸ, ವಂಚನೆ ಮಾಡಿದ್ದು ಕಂಡು ಬಂದಿರುತ್ತದೆ. ಈ ರೀತಿಯಾಗಿ ಶ್ರೀ ಮುರ್ಡೇಶ್ವರ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿಯನ್ನು ಹರಡಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಜನತೆಗೆ ಮೋಸ ಮಾಡಿರುವ ಈತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂತಾ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ದಾಖಲಿಸಿಕೊಂಡ ಮುರ್ಡೇಶ್ವರ ಸಬ್ ಇನ್ಸಪೆಕ್ಟರ್ ತನಿಖೆ ಕೈಗೊಂಡಿದ್ದಾರೆ.