ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ :ನಟೋರಿಯಸ್ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬ ಸೋಮವಾರ ಕಣ್ಣಿಗೇರಿ ಬಳಿ ಯಲ್ಲಾಪುರ ಪೋಲಿಸರ ಕೈವಶವಾಗಿದ್ದಾನೆ.ಪೋಲಿಸರ ಮೇಲೆ
ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಹೋದಾಗ ಪೋಲಿಸರು ಆತನಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಪ್ರವೀಣ ಸುಧೀರ್ ರಾಮನಗರ ಎಂಬಾತ ಪಿಎಸ ಐ ಮೇಲೆ ಹಲ್ಲೆ ಸೇರಿದಂತೆ ೧೫ ಕ್ಕೂ ಅಧಿಕ ಪ್ರಕರಣದಲ್ಲಿ ಭಾಗಿಯಾಗಿದ್ದು ಈತನ ಮೇಲೆ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡು ತಿರುಗಾಡುತ್ತಿದ್ದ.ಆಕಸ್ಮಿಕ ಸೋಮವಾರ ಕಣ್ಣಿಗೇರಿ ಬಳಿ ಈತ ಪೋಲಿಸ್ ಬಲೆಗೆ ಬಿದ್ದದಿದ್ದ ಈತನನ್ನು ಬಂಧಿಸುವ ವೇಳೆ ಪೋಲಿಸರ ಬಂದೂಕು ಸಪ್ಪಳ ಮಾಡಿದೆ.ಈ ಸಂದರ್ಭದಲ್ಲಿ ಯಲ್ಲಾಪುರ ಠಾಣೆಯ ಮೂವರು ಪೋಲಿಸರು, ಸಿಬ್ಬಂದಿ ಹಾಗೂ ಓರ್ವ ಪಿಎಸ್ಐ ಅವರುಗಳಿಗೆ ಗಾಯಗಳಗಾಗಿದ್ದು ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಉ.ಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಮಾಹಿತಿ ಪಡೆದು ಮಾರ್ಗದರ್ಶನ ನೀಡಿದರು.
ಆರೋಪಿ ಪ್ರವೀಣ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.–