Banner Ad

ಸುದ್ದಿ ಕನ್ನಡ ವಾರ್ತೆ

ದಾಂಡೇಲಿ:ನಗರದ ಹಳೆ ದಾಂಡೇಲಿಯ ಲಮಾಣಿಚಾಳದ ನಿವಾಸಿಗಳಾದ ಯಾಸೀನ್ ಹೆಬ್ಬಳ್ಳಿ ಹಾಗೂ ಆರ್ಜುಬಾನು ದಂಪತಿಯ ಪುತ್ರರಾದ ಆಜಾನ್ ಮಹ್ಮದ್ ಯಾಸೀನ್ ಹೆಬ್ಬಳ್ಳಿ ನಾಪತ್ತೆಯಾಗಿದ್ದ ಬಾಲಕ ಆತನ ಮನೆಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.

Banner Ad

ಆಜಾನ್ ಮಹ್ಮದ್ ಯಾಸೀನ್ ಹೆಬ್ಬಳ್ಳಿ ಎಂಬಾತ ಬಾಲಕನು ಔಷಧಿಯನ್ನು ಕುಡಿಯಲು ಹೆದರಿ ಮನೆಯಲ್ಲಿ ಆಟದ ಸಾಮಾನುಗಳನ್ನು ಇಟ್ಟಿರುವ ಕೊಠಡಿಯಲ್ಲಿ ಮಲಗಿದ್ದ ಎನ್ನಲಾಗಿದೆ. ಕುಟುಂಬದವರು ಸರಿಯಾಗಿ ಮನೆಯಲ್ಲಿ ಪರಿಶೀಲಿಸದೇ ನಾಪತ್ತೆಯಾದ ಬಗ್ಗೆ ಹಳೆ ದಾಂಡೇಲಿ ಮತ್ತು ದಾಂಡೇಲಿಯ ನಗರದಲ್ಲಿ ಬಾಲಕ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಹರಿದಾಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಥಳೀಯರಿಗೆ,ನಗರದ ಜನತೆಗೆ,ಆರಕ್ಷಕ ಇಲಾಖೆಯವರಿಗೆ ತಲೆ ನೋವಾಗಿ ಪರಿಣಮಿಸಿದ್ದ ಹಾಗೂ ಆತಂಕಕ್ಕೆ ಕಾರಣವಾಗಿದ್ದ ಘಟನೆಯು ಬಾಲಕ ಆಜಾನ್ ಮಹ್ಮದ್ ಯಾಸೀನ್ ಹೆಬ್ಬಳ್ಳಿ ಆತನ ಮನೆಯಲ್ಲೇ ಪತ್ತೆಯಾಗುವ ಮೂಲಕ ಎಲ್ಲರ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ ಸುಖಾಂತ್ಯಗೊಂಡು ಪಾಲಕರು ನಿಟ್ಟುಸಿರು ಬಿಡುವಂತಾಯಿತು.

Banner Ad