Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಅಂಬಾಳಿಯ ಶ್ರೀ ಚಂದ್ರೇಶ್ವರ ದೇವರ ವಾರ್ಷಿಕೋತ್ಸವ ದಿನಾಂಕ:08-03-2026 ರ ರವಿವಾರದಂದು ನಡೆಯಲಿದೆ.

Banner Ad

ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ 11.00 ಗಂಟೆಗೆ ಶ್ರೀ ಚಂದ್ರೇಶ್ವರ ದೇವರ ಅಭಿಷೇಕ ಮತ್ತು 1.00 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ,4:00 ಗಂಟೆಯಿಂದ ರಾತ್ರಿ 9:30ರ ವರೆಗೆ ಅನ್ನಸಂತರ್ಪಣೆ ನಡೆಯುವುದು. ರಾತ್ರಿ 10.00 ಗಂಟೆಗೆ ಸವಾಲ್ ಕಾರ್ಯಕ್ರಮ ನಡೆಯಲಿದೆ. ಭಕ್ತರ ವಿಶೇಷ ಮನರಂಜನೆಗಾಗಿ ಶ್ರೀ ಚಂದ್ರೇಶ್ವರ ನಾಟ್ಯ ಮಂಡಳಿ ಇವರು ಪ್ರದರ್ಶಿಸುವ ಸಬೀನ ಸುಭಾಶ ಗೋಪಶೀಟಕರ (ಗೋಪಶಿಟ್ಟಾ) ವಿರಚಿತ ವಿಧಿಚೊ ಖೆಳ ಎಂಬ ಕೊಂಕಣಿ ಸುಂದರ ಕೌಟುಂಬಿಕ ಕಲಾಕುಸುಮ ನಾಟಕದ ಪ್ರದರ್ಶನ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ಸಂಘಟಕರು ವಿನಂತಿಸಿಕೊಂಡಿದ್ದಾರೆ.

Banner Ad