ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಶಿರಸಿಮಾರಿಕಾಂಬಾ ಜಾತ್ರೆಯವೇಳೆ ದರೋಡೆ ನಡೆಸಲು
ಮಹಾರಾಷ್ಟ್ರದಿಂದ ಆಗಮಿಸಿದ್ದ
8 ಮಂದಿ ಅಂತರಾಜ್ಯ ದರೋಡೆಕೋರರ ತಂಡವನ್ನುಯಲ್ಲಾಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬುಧವಾರ ಮುಂಜಾನೆ ಬಂಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕೆ.ಮಿಲನ್
ಹೋಟೆಲ್ ಬಳಿ ದರೋಡೆಗೆ
ಹೊಂಚು ಹಾಕುತ್ತಿದ್ದಾಗ ಖಚಿತ
ಮಾಹಿತಿ ಮೇರೆಗೆ ದಾಳಿ ನಡೆಸಿದ
ಪೊಲೀಸರು, ಮಾರಕಾಸ್ತ್ರಗಳ
ಸಮೇತ ಆರೋಪಿಗಳನ್ನು
ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಪುಣೆ ಮತ್ತು ಥಾಣೆ ಮೂಲದ ಉಮೇಶ ರಾಮಾ ಗಾಯಕವಾಡ (35), ಶ್ರೀನಾಥ ಶಂಕರ ಜಾದವ (39). ಲಖನ್ ಜಾದವ (30), ಸುಹಾಸ್ ಅಖಿಲ್ ಪವಾರ (35), ದೀಪಕ ಚೆಂದರಲಾಲ್ ದುಂಬಾನಿ (47), ಸುಂದರ ಕೈಲಾಸ್ ಗಾಯಕವಾಡ (50) ಹಾಗೂ ಮಹಿಳಾ ಆರೋಪಿಗಳಾದ ನಾಗುಬಾಯಿ ಗಣೇಶ ಜಾದವ (50) ಮತ್ತು ಅಂಬಿಕಾ ಪ್ರಕಾಶ ಜಾದವ (39) ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ದರೋಡೆಕೋರರು ಮಹಾರಾಷ್ಟ್ರದ ‘ಕೈಕಡಿ’ ಸಮುದಾಯಕ್ಕೆ ಸೇರಿದವರಾಗಿದ್ದು, ಕಳೆದ 3-4 ವರ್ಷಗಳಿಂದ ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳು ಮತ್ತು ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು. ಜನಸಂದಣಿ ಇರುವ ಪ್ರದೇಶಗಳಲ್ಲಿ ಪಿಕ್ ಪಾಕೆಟ್, ಚೈನ್ ಸ್ಯಾಚಿಂಗ್ ಹಾಗೂ ಮಹಿಳೆಯರ ಬಳೆಗಳನ್ನು ಕಳ್ಳತನ ಮಾಡುವುದು ಇವರ ಪ್ರವೃತ್ತಿಯಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳ ಬಗ್ಗೆ ಮಾಹಿತಿ ಪಡೆದು. ತಮ್ಮ ವಾಹನದೊಂದಿಗೆ ಅಲ್ಲಿಗೆ ತೆರಳಿ ಕೃತ್ಯ ಎಸಗಿದ ನಂತರ ತಕ್ಷಣವೇ ಪರಾರಿಯಾಗುತ್ತಿದ್ದರು.ಬಂಧಿತರು ಅತ್ಯಂತ ಅಪಾಯಕಾರಿ ಮತ್ತು ಕ್ರೂರ ಸ್ವಭಾವದವರಾಗಿದ್ದು, ಕಳ್ಳತನ ಅಥವಾ ದರೋಡೆ ಮಾಡುವಾಗ ಯಾರಾದರೂ ಇವರನ್ನು ಹಿಡಿಯಲು ಮುಂದಾದರೆ ಕಲ್ಲಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಈ ಹಿಂದೆ ಜಿಲ್ಲೆಯ ಗೋಕರ್ಣಮತ್ತು ಮುರ್ಡೇಶ್ವರದಲ್ಲಿಯೂ ಕಳ್ಳತನ ಎಸಗಿದ್ದರು. ಇದೀಗ ವಿಶ್ವಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ಮತ್ತು ಪರ್ಸ್ ಕಳ್ಳತನ ನಡೆಸಲು ಸಂಚು ರೂಪಿಸಿ ಬಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮಾರುತಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 4 ಲಕ್ಷ ರೂ. ಮೌಲ್ಯದ ವಿವಿಧ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್ ಮತ್ತು ಡಿವೈಎಸ್ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ, సిపిఐ ರಮೇಶ ಪಿಎಸ್ಐಗಳಾದ ಹನಾಪೂರ, ಶ್ರೀಧರ ಎಸ್.ಆರ್. ಸಿದ್ದಪ್ಪ ಗುಡಿ, ರಾಜಶೇಖರ ವಂದಲಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ಪೊಲೀಸರ ಈ ಸಮಯೋಚಿತ ಕ್ರಮದಿಂದಾಗಿ ಶಿರಸಿ ಜಾತ್ರೆಯಲ್ಲಿ ಸಂಭವಿಸಬಹುದಾಗಿದ್ದ ಭಾರಿ ದರೋಡೆ ತಪ್ಪಿದಂತಾಗಿದೆ.
