Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಬಾರಾಡಿಯ ಪ್ರಸಿದ್ದ ದೇವರು,ಶ್ರೀ ಆಧಿನಾಥ ದೇವರು ಮತ್ತು ಪರಿವಾರ ದೇವರ ವಾರ್ಷಿಕ ಪೂಜಾ ವಿಧಿ ವಿಧಾನಗಳು ನಾಳೆ ಮಂಗಳವಾರ ವಿಜೃಂಭಣೆ ಯಿಂದ ನಡೆಸಲು ದೇವಸ್ಥಾನ ದ ಆಡಳಿತ ಮಂಡಳಿ ಮತ್ತು ಊರನಾಗರಿಕರು ನಿರ್ಧರಿಸಿದ್ದಾರೆ. ಬೆಳಿಗ್ಗೆಯಿಂದ ದೇವರ ಪೂಜಾ ವಿಧಿ ವಿಧಾನ ಗಳು ಆರಂಭ ವಾಗಿ ಮದ್ಯಾಹ್ನ ತೀರ್ಥ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ, ನಡೆಯಲಿವೆ. ರಾತ್ರಿ 10 ಘಂಟೆಗೆ ಶ್ರೀ ದೇವರ ಪ್ರಸಾದ ಗಳ ಸವಾಲು, ನಂತರ ಭಕ್ತರ ಮನರಂಜನೆ ಗಾಗಿ,, ಸಿಂಧೂರಾಸುರ ವಧ,, ಎಂಬ ಮರಾಠಿ ನಾಟಕ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಬಂದು ಶ್ರೀದೇವರ,ಮತ್ತು ಪರಿವಾರ ದೇವರುಗಳ ಅನುಗ್ರಹ ಕ್ಕೆ ಪಾತ್ರ ರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಯವರು ಮತ್ತು ಊರ ನಾಗರಿಕರು ವಿನಂತಿಸಿದ್ದಾರೆ.

Banner Ad
Banner Ad