ಸುದ್ದಿ ಕನ್ನಡ ವಾರ್ತೆ
ಶಿರಸಿ: ನಿಲ್ಲದ ಮಳೆ, ಸುಳಿವಿರದ ನಾಪತ್ತೆಯಾದ ಯುವಕ, ಕುಟುಂಬಸ್ಥರದಲ್ಲಿ ಹೆಚ್ಚಾದ ಆತಂಕದ ಮಧ್ಯೆ ಮಂಗಳವಾರ ಕೂಡ ಮತ್ತಿಘಟ್ಟ ಪಾಲ್ಸ ಬಳಿ ನಾಪತ್ತೆಯಾದ ಯುವಕನ ಶೋಧ ಕಾರ್ಯ ನಡೆಯಿತು.
ಪೊಲೀಸರು, ಮುಳಗು ತಜ್ಞರು, ಅಗ್ನಿ ಶಾಮಕ ದಳದವರು, ಗ್ರಾಮಸ್ಥರು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಶ್ರಮಿಸಿದರು.
ತಾಲೂಕಿನ ಮತ್ತಿಘಟ್ಟ ಬಳಿಯ ಜೋಗನ ಹಕ್ಕಲ ಫಾಲ್ಸ್ ನಲ್ಲಿ ಕಾಣೆಯಾಗಿರುವ ಉಂಬಳೆಕೊಪ್ಪದ ಪವನ್ ಗಣಪತಿ ಜೋಗಿ ಹುಡುಕುವ ಪ್ರಯತ್ನ ಮೂರನೇ ದಿನವೂ ಫಲಕಾರಿ ಆಗಲಿಲ್ಲ.
ರವಿವಾರ ಸಂಜೆಯಿಂದ ಪ್ರಾರಂಭವಾದ ಕಾರ್ಯಚರಣೆ ಸೋಮವಾರ, ಮಂಗಳವಾರ ಕೂಡ ನಡೆಯುತ್ತಿದೆ. ತನ್ನ ಗೆಳೆಯನ ಜೊತೆ ಪಾಲ್ಸಗೆ ಬಂದಿದ್ದ ಪವನ್ ರವಿವಾರ ಮಧ್ಯಾಹ್ನ ವೇಳೆಗೆ ಕಾಲು ಜಾರಿ ಬಿದ್ದು ನಾಪತ್ತೆ ಆಗಿರುವದಾಗಿ ದೂರು ದಾಖಲಾಗಿತ್ತು.