ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸೂಪಾದ ಗ್ರಾಮ ದೇವರಾಗಿದ್ದ, ರಾಮನಗರದ ಶ್ರೀ ರಾಮಲಿಂಗ ದೇವರ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ದಿನಾಂಕ:15-02-2026 ರ ಮಹಾಶಿವರಾತ್ರಿಯ ದಿನದಂದು ಚಾಲನೆ ನೀಡಲಾಗಿದೆ. ಪ್ರತಿದಿನವೂ ಸಂಜೆಯ ವೇಳೆ ಪಾಲ್ಕಿ ಸೇವೆ, ಹರಿಕಿರ್ತನೆ, ದಿನಾಂಕ:22-02-2026 ಶ್ರೀ ದೇವರ ರಥಾರೋಹಣ, ಮನರಂಜನೆಗಾಗಿ ಆರ್ಕೆಸ್ಟ್ರಾ ಇನ್ನಿತರ ಕಾರ್ಯಕ್ರಮ ನಡೆಯಲಿದೆ. ದಿನಾಂಕ:23-02-2026 ರ ಸೋಮವಾರ ಮಧ್ಯಾಹ್ನ 4-00 ಗಂಟೆಗೆ ಶ್ರೀ ರಾಮಲಿಂಗ ದೇವರ ಮುಖ್ಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.ರಾತ್ರಿ 11-00 ಗಂಟೆಗೆ ಜ್ಯೋತಿಭಾ ನಾಟ್ಯ ಮಂಡಳಿಯವರ ವತಿಯಿಂದ ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ.ದಿನಾಂಕ:26-02-2026 ರ ಗುರುವಾರದವರೆಗೆ ಜಾತ್ರಾಮಹೋತ್ಸವ ಕಾರ್ಯಕ್ರಮ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ರಾಮಲಿಂಗ ದೇವರ ದೇವಸ್ಥಾನ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.
