ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಬಿಸ್ಗೋಡ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು ಈ ಭಾಗದ ಜನರು ಓಡಾಟ ನಡೆಸುವುದು ಕಷ್ಟಕರವಾಗಿದೆ. ಇದನ್ನು ಕಂಡು ಕಾಣದಂತೆ ಜನಪ್ರತಿನಿಧಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಂತಿದೆ.

ತಾಲೂಕಿನಾದ್ಯಂತ ಸದ್ಯ ಭಾರಿ ಮಳೆ ಆಗುತ್ತಿದ್ದು ರಸ್ತೆ ಹೊಂಡಗಳಲ್ಲಿ ನೀರು ತುಂಬಿದ್ದು ವಾಹನ ಸವಾರರಲ್ಲಿ ಅಪಘಾತದ ಭಯ ಮನೆ ಮಾಡಿದೆ.
ಸಂಪೂರ್ಣ ಹೊಂಡಗಳಿಂದಲೇ ತುಂಬಿರುವ ಈ ರಸ್ತೆ ಓಡಾಟಕ್ಕೆ ದಾರಿಯೇ ಇಲ್ಲ ಎಂಬಂತಿದೆ. ಇನ್ನಾದರೂ ಎಚ್ಚೆತ್ತು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರ ಆಗ್ರಹವಾಗಿದೆ.