ಸುದ್ದಿ ಕನ್ನಡ ವಾರ್ತೆ

ಶಿರಸಿ: ಇಲ್ಲಿನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಮಹಿಳಾ ಕೆಡೆಟ್ ಅಶ್ವಿನಿ ಗಜಾನನ ಹೆಗಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೆಡ್ ಗೆ ಮತ್ತು ಪಿ ಎಂ ರಾಲಿಗೆ ಆಯ್ಕೆಯಾಗಿದ್ದಾಳೆ.

ಮಹಾವಿದ್ಯಾಲಯದ ಎನ್ ಸಿ ಸಿ ವಿಭಾಗ ಮತ್ತು ಕಾರವಾರ ಬೆಟಾಲಿಯನ್ ನಲ್ಲಿಯೇ ಎರಡು ರಾಲಿಗೆ ಆಯ್ಕೆಯಾದ ಮೊದಲ ಮಹಿಳಾ ಕೆಡೆಟ್ ಆಗಿದ್ದಾಳೆ.

ಇವಳ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಹಾಗೂ ಎಂಇಎಸ್ ನ ಪದಾಧಿಕಾರಿಗಳು, ಉಪಸಮಿತಿ ಅಧ್ಯಕ್ಷ ಎಸ್ ಕೆ ಭಾಗವತ್, ಪ್ರಾಚಾರ್ಯ ಪ್ರೊ ಜಿ ಟಿ ಭಟ್, ಎನ್ ಸಿ ಸಿ ಅಧಿಕಾರಿ ರಾಘವೇಂದ್ರ ಹೆಗಡೆ ಜಾಜಿಗುಡ್ಡೆ, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ಮಹಾವಿದ್ಯಾಲಯದ ಎಲ್ಲಾ ಎನ್ ಸಿ ಸಿ ಕೆಡೆಟ್ ಗಳು ಹರ್ಷ ವ್ಯಕ್ತಪಡಿಸಿದ್ದಾರೆ.