ಸುದ್ಧಿಕನ್ನಡ ವಾರ್ತೆ
ಜೋಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಬಡ ರೈತರಿಗೆ ರೂ. 10-15 ಲಕ್ಷದ ಫ್ಯಾಕೇಜ್ ಆಸೆ ತೋರಿಸಿ, ಅವರನ್ನು ಇಲ್ಲಿಂದ ಕಾನೂನು ಬಾಹಿರವಾಗಿ ಒಕ್ಕಲೆಬ್ಬಿರುವ ಕಾರ್ಯದಲ್ಲಿ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ನಿರತರಾಗಿದ್ದಾರೆ. ಅವರು ಎಲ್ಲಾ ನಿಮಯ ಮತ್ತು ಕಾನೂನುಗಳನ್ನು ಗಾಳಿಗೆ ತೂರಿ, ಸುಮಾರು 152 ಕೋಟಿಯ ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ.
ಈ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಸಚಿವಾಲಯ ತನಿಖೆಗೆ ಆದೇಶಿಸಿದ್ದು, ತಪಿತಸ್ಥ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ, ಉತ್ತರ ಕನ್ನಡ ಜಿಲ್ಲಾ ಕುಣಬಿ ಸಮಾಜ ಸಂಘ ಮತ್ತು ಇತರೆ ಸಂಘಟನೆಗಳು ದಿನಾಂಕ: 08/ ರಂದು ಕುಂಬಾರವಾಡಾ ಬಂದ್‍ಗೆ ನೀಡಿರುವ ಕರೆಯನ್ನು ಬೆಂಬಲಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಕಾಳಿ ಬ್ರಿಗೇಡ ಸಂಘಟನೆ ಮುಖ್ಯ ಸಂಚಾಲಕ ಸುನೀಲ ದೇಸಾಯಿ ಇಂದು ಮಂಗಳವಾರ ತಿಳಿಸಿದ್ದಾರೆ.
ಅವರು ಇಂದು ಪತ್ರಕರ್ತರೋಂದಿಗೆ ಮಾತನಾಡುತ್ತಾ: ಅರಣ್ಯ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಕಾಳಿ ಬ್ರಿಗೇಡ್ ಕಳೆದ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿ, ಭೃಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಾ ಬಂದಿದೆ. ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಕೂಡಾ ಆಗಿದೆ. ಆದರೆ ಅದರಿಂದ ಬುದ್ಧಿ ಕಲಿಯದ ಅನೇಕ ಅಧಿಕಾರಿಗಳು ಇಲ್ಲಿಗೆ ಹಣ ಮಾಡುವ ಉದ್ದೇಶದಿಂದ ಬಂದು, ಸರ್ಕಾರದ ಹಣವನ್ನು ಮನಸ್ಸಿಗೆ ಬಂದoತೆ ವ್ಯಯಿಸಿದ್ದಾಗಿ ಸರ್ಕಾರಕ್ಕೆ ಸುಳ್ಳು ಮತ್ತು ತಪ್ಪು ಲೆಕ್ಕ ತೋರಿಸಿ, ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೇಸಾಯಿ ಆರೋಪಿಸಿದ್ದಾರೆ.
ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಅವ್ಶೆಜ್ಞಾನಿಕ ಸಿವಿಲ್ ಕಾಮಗಾರಿ ಮತ್ತು ಜೆಸಿಬಿ ಬಳಕೆ ಮಾಡುತ್ತಿರುವುದರಿಂದ, ವನ್ಯ ಜೀವಿಗಳು ಹೆದರಿ ರೈತರ ಮೇಲೆ ಮತ್ತು ಗ್ರಾಮಗಳಿಗೆ ದಾಳಿ ಮಾಡುತ್ತಿದ್ದು, ರೈತರ ಬೆಳೆ ಕೂಡಾ ನಾಶ ಮಾಡುತ್ತಿವೆ. ಇದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ತಪ್ಪು ನಿರ್ಧಾರಗಳೇ ಕಾರಣ. ಇದರಿಂದ ರೋಸಿ ಹೋಗಿರುವ ಇಲ್ಲಿಯ ಜನರು ಮುಂದಿನ ದಿನಗಳಲ್ಲಿ ಕಾಳಿ ಬ್ರಿಗೇಡ್ ನೇತೃತ್ವದಲ್ಲಿ ಹೋರಾಟ ಮಾಡಲ್ಲಿದ್ದಾರೆ ಎಂದು ದೇಸಾಯಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ ಮುಖ್ಯ ಸಮಿತಿ ಅಧ್ಯಕ್ಷ ಉಮೇಶ ವೇಳಿಪ, ಕಾರ್ಯದರ್ಶಿ ಸಮೀರ ಮುಜಾವರ, ಮಾಜಿ ಅಧ್ಯಕ್ಷರಾದ ಸತೀಶ ನಾಯ್ಕ, ಕಿರಣ ನಾಯ್ಕ, ಮಾಜಿ ಕಾರ್ಯದರ್ಶಿ ಪ್ರಭಾಕರ ನಾಯ್ಕ, ನಾರಾಯಣ ಹೆಬ್ಬಾರ, ದಿನೇಶ ದೇಸಾಯಿ, ಮುಂತಾದ ಕಾಳಿ ಬ್ರಿಗೇಡನ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು