ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ಃವಾಸ್ತವ್ಯದ ಮನೆಯೊಳಗೆ ಜಿಂಕೆ ಮಾಂಸ ಸಂಗ್ರಹಿಸಿದ್ದ ಯಲ್ಲಾಪುರ ತಾಲೂಕಿನ ಮದನೂರಿನ ರಮೇಶ ನಾಗೇಶ ಗಾಂವ್ಕಾರ್ ಹುಲಗೋಡ ಎಂಬಾತನನ್ನು
ಅರಣ್ಯ ಇಲಾಖೆಯವರು ದಾಳಿ ನಡೆಸಿ ಬಂಧಿಸಿದ ಘಟನೆ ಗುರುವಾರ ನಡೆದಿದೆ.

ಮದನೂರು ಸಮೀಪದ ಹುಲಗೋಡಿನ ರಮೇಶ ನಾಗೇಶ ಗಾಂವ್ಕಾರ್ ಎಂಬಾತನ ಮನೆಯಲ್ಲಿ ಜಿಂಕೆ ಮಾಂಸ ಪತ್ತೆಯಾಗಿದೆ.

ಹುಲಗೋಡ ಶಾಖೆಯ ಅರಣ್ಯ ಬ್ಲಾಕ್ & ಕಂ. 15-18 ರಲ್ಲಿ ಒಂದು ಜಿಂಕೆಯನ್ನು ಬೇಟೆಯಾಡಿ ಕಾಲು-2, ತಲೆ-1, ಜಿಂಕೆ ಚರ್ಮವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಮಾಂಸವನ್ನು ತನ್ನ ಸ್ವಂತ ಮನೆಯಲ್ಲಿ ದಾಸ್ತಾನು ಇಟ್ಟು ಮಾರಾಟ ಮಾಡುವ ದಂಧೆಯನ್ನು ತನ್ನ ವೃತ್ತಿಯನ್ನಾಗಿ ನಡೆಸಿಕೊಂಡು ಬಂದಿರುವುದಾಗಿ ತನಿಖೆಯಲ್ಲಿ ಪತ್ತೆಯಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ಬಂದಿಸಲಾಗಿದೆ.

  1. ಆರೋಪಿಯನ್ನು ಹೆಚ್ಚಿನ ತಪಾಸಣೆ ಮಾಡಲಾಗಿ ಈ ಹಿಂದೆಯೂ ಇಂತಹ ಕೃತ್ಯಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ ಮತ್ತು ಈತನೊಂದಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಇತರ ಹೆಸರುಗಳನ್ನು ತಿಳಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ‌ ಎಂದು ಇಲಾಖೆ ತಿಳಿಸಿದೆ.

ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ್ , ಉಪ ವಲಯ ಅರಣ್ಯಾಧಿಕಾರಿಗಳಾದ ಆನಂದ, ವಿನಯ, ಮಂಜುನಾಥ, ಪ್ರಕಾಶ್, ಕಿರಣಕುಮಾರ್ ಹಾಗೂ ವಲಯದ ಗಸ್ತು ವನಪಾಲಕರು ಮತ್ತು ಇತರೆ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.—-