ಸುದ್ದಿ ಕನ್ನಡ ವಾರ್ತೆ

ಶಿರಸಿ: ತಾಲೂಕಿನ ಜಾನ್ಮನೆ ವಲಯದ ಹೆಗ್ನೂರ್ ಗ್ರಾಮದ ಬೆಟ್ಟದಲ್ಲಿ ಚಿರತೆಯೊದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದೆ.

ಒಂದು ವರ್ಷದ ಹೆಣ್ಣು ಚರತೆ ಇದಾಗಿದೆ.ಈ ಬಗ್ಗೆ ಚಿರತೆ ಶವದ ಮಾದರಿ ಪ್ರಯೋಗಾಲಯಕ್ಕೆ ಕಳಿಸಿ ಚಿರತೆಯ ಖಚಿತ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಅಜ್ಜಯ್ಯ ಜಿ ಆರ್, ಜಾನ್ಮನೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಿಎನ್ ಹರೀಶ್, ಜಾನ್ಮನೆ ವಲಯ ಅರಣ್ಯಾಧಿಕಾರಿ ಶಿವಾನಂದ ಎಸ್ ನಿಂಗಾಣಿ, ಹೆರೂರ್ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಮುತ್ತಣ್ಣ ಹಂದ್ರಾಳ ಹಾಗು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.