ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ಗಂಡ ಹಾಗೂ ಮಕ್ಕಳಿಲ್ಲದೆ ಕೊರಗುತ್ತಿದ್ದ ಯಲ್ಲಾಪುರ ತಾಲೂಕಿನ ಗುಳ್ನಾಪುರದ ವೃತ್ತಿ ಮಹಿಳೆಗೆ ದಾಂಡೇಲಿಯ ಮಾರುತಿನಗರದ ಎಜಿಕೆಲ್ ಗಜ್ಜಾ ಫೌಂಡೇಶನ್ ವೃದ್ಧಾಶ್ರಮವು ಆಶ್ರಯ ನೀಡಿ ಮಾನವೀಯತೆ ಮೆರೆದಿದೆ.

ಯಲ್ಲಾಪುರದ ಗುಳ್ನಾಪುರದ ನಿವಾಸಿಯಾಗಿರುವ ಪಾರ್ವತಿ ಸನ್ಯಾ ಸಿದ್ದಿ ಅವರನ್ನು ಅವರ ಸ್ಥಿತಿಯನ್ನು ಕಂಡು ಮರುಗಿದ
ಅಂಬಿಕಾನಗರದ ಕ್ರೈಸ್ತ ಧರ್ಮಗುರು ಇಮಾನ್ವೆಲ್ ಅವರು ದಾಂಡೇಲಿಯ ಮಾರುತಿನಗರದ ಎಜಿಕೆಲ್ ಗಜ್ಜಾ ಫೌಂಡೇಶನ್ ಇದರ ಅಧ್ಯಕ್ಷರಾದ ಚಿನ್ನಯ್ಯ ಆಶೀರ್ವಾದಂ ಗಜ್ಜ ಅವರಿಗೆ ಪಾರ್ವತಿ ಸನ್ಯಾ ಸಿದ್ದಿಯವರ ಬಗ್ಗೆ ಮಾಹಿತಿಯನ್ನು ನೀಡಿ, ಆಶ್ರಯ ನೀಡುವಂತೆ ವಿನಂತಿಸಿಕೊಂಡಿದ್ದರು. ಅವರ ವಿನಂತಿಗೆ ಪಾರ್ವತಿ ಸನ್ಯಾ ಸಿದ್ದಿ ಅವರಿಗೆ ಆಶ್ರಯ ನೀಡಲು ಚಿನ್ನಯ್ಯ ಆಶೀರ್ವಾದಂ ಗಜ್ಜ ಅವರು ಒಪ್ಪಿದ್ದರು.

ಪಾರ್ವತಿ ಸನ್ಯಾ ಸಿದ್ದಿ ಅವರನ್ನು ಸೋಮವಾರ ದಾಂಡೇಲಿಗೆ ಕರೆತಂದು ಎಜಿಕೆಲ್ ಗಜ್ಜಾ ಫೌಂಡೇಶನ್ ವೃದ್ಧಾಶ್ರಮಕ್ಕೆ ಅದರ ಅಧ್ಯಕ್ಷರಾದ ಚಿನ್ನಯ್ಯ ಆಶೀರ್ವಾದಂ ಗಜ್ಜ ಅವರ ಮೂಲಕ ಒಪ್ಪಿಸಲಾಯಿತು. ಪಾರ್ವತಿ ಸನ್ಯಾ ಸಿದ್ದಿಯವರನ್ನು ಅವರ ಜೀವನ ಪರ್ಯಾಂತ ನೋಡಿಕೊಳ್ಳುವ ಭರವಸೆಯನ್ನು ಚಿನ್ನಯ್ಯ ಆಶೀರ್ವಾದಂ ಗಜ್ಜ ಅವರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮ ಗುರು ಇಮಾನ್ವೆಲ್ ಹಾಗೂ
ಪಾರ್ವತಿ ಸನ್ಯಾ ಸಿದ್ದಿ ಅವರ ಸಹೋದರರಾದ ಗಣಪತಿ ಸಿದ್ದಿ ಅವರು ಉಪಸ್ಥಿತರಿದ್ದರು.