ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಪ್ರತಿ ಗ್ರಾಮಕ್ಕೂ ಇಂಟರ್ನೆಟ್ ಸಂಪರ್ಕಿಸುವ ಉದ್ದೇಶದಿಂದ ನೂರಾರು BSNL  ಟವರ್ ಗಳು ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿದೆ.

ಈ ಯೋಜನೆಯ ಅಡಿಯಲ್ಲಿ ಮಲವಳ್ಳಿ ಮಾವಿನ ಮನೆ ಪಂಚಾಯತ್ ವ್ಯಾಪ್ತಿಯಲ್ಲಿ ಮಂಜೂರಾದ ಶಿಗೆಕೇರಿ (ಬಾರೆಗ್ರಾಮ) ಮರಹಳ್ಳಿ ಟವರ್ ಗಳ ಭೂಮಿ ಪೂಜೆ ಕಾರ್ಯ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಭಟ್ ಶಿಗೆಕೇರಿ, ಸಿವಿಲ್ ಗುತ್ತಿಗೆದಾರರಾದ ಸೀತಾರಾಮ್ ಭಟ್ ಶೇಡಿಮನೆ, ಪುರೋಹಿತರಾದ ರಾಮಚಂದ್ರ ಭಟ್, ಶಂಕರನಾರಾಯಣ ಭಟ್ ,  ಸಾಮಾಜಿಕ ಕಾರ್ಯಕರ್ತರಾದ ರಾಜಾರಾಮ್ ಗಾಂವ್ಕರ್ , ಅಂಗನವಾಡಿ ಕಾರ್ಯಕರ್ತೆ ಶೈಲಾ ಭಟ್, ಸ್ಥಳೀಯರಾದ ರಾಮಕೃಷ್ಣ ಭಟ್, ಮಂಜುನಾಥ ಭಟ್, ಉಪಸ್ಥಿತರಿದ್ದರು.

ಈ ಯೋಜನೆಯ ಗುತ್ತಿಗೆದಾರರಾದ ರಾಜೀವ್ ರವರು ಉಪಸ್ಥಿತರಿದ್ದು ಶೀಘ್ರದಲ್ಲಿಯೇ ಈ ಭಾಗದ ಎಲ್ಲಾ ನಾಲ್ಕು ಬಿಎಸ್ಎನ್ಎಲ್ ಟವರ್ ಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂಬ ಭರವಸೆ ನೀಡಿದರು.