ಸುದ್ದಿ ಕನ್ನಡ ವಾರ್ತೆ
ದಾಂಡೇಲಿ : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದ ದಾಂಡೇಲಿ – ಜೋಯಿಡಾ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವನ್ಯಪ್ರಾಣಿಗಳು ಇರುವುದು ಸಹಜ. ವನ್ಯಪ್ರಾಣಿಗಳ ಪೈಕಿ ಆನೆಗಳು ಆಗೊಮ್ಮೆ ಈಗೊಮ್ಮೆ ರಸ್ತೆಯ ಹತ್ತಿರ ಬರುವುದರ ಮೂಲಕ ಹಾಗೂ ರಸ್ತೆ ದಾಟುವ ಮೂಲಕ ದರ್ಶನ ಕೊಡುತ್ತವೆ. ಅಂದ ಹಾಗೆ ದಾಂಡೇಲಿ – ಹಳಿಯಾಳ ರಸ್ತೆಯಲ್ಲಿ ಬರುವ ತಾಟಗೇರದ ಹತ್ತಿರ ಆನೆಯೊಂದು ರಾಜ್ಯ ಹೆದ್ದಾರಿಯನ್ನು ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಆನೆ ಬರುತ್ತಿರುವುದನ್ನು ಗಮನಿಸಿದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಒಮ್ಮೆ ಗಾಬರಿಗೊಂಡರೂ, ಆನೆ ಮಾತ್ರ ಯಾವುದೇ ಭಯದ ವಾತಾವರಣವನ್ನು ಸೃಷ್ಟಿಸದೇ ತನ್ನ ಪಾಡಿಗೆ ತಾನು ರಸ್ತೆಯನ್ನು ದಾಟಿ ಹೋಯಿತು.