ಸುದ್ದಿ ಕನ್ನಡ ವಾರ್ತೆ
ಶಿರಸಿ: ಹಿಂದೆಲ್ಲ ಇದ್ದ ಕಾಂಗ್ರೆಸ್ ಭ್ರಷ್ಟಾಚಾರ ಹಗರಣ ಮುರಿದು ಸಿದ್ದರಾಮಯ್ಯ ಅವರು ಮೂಡಾ ಹಗರಣದ ಮೂಲಕ ಹೊಸ ದಾಖಲೆ ಮಾಡಿದ್ದಾರೆ
ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.
ಸೋಮವಾರ ಅವರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ,
ಮೈಸೂರಿನ ಮೂಡಾ ಹಗರಣದಲ್ಲಿ ಇಡಿ ಸಾಕಷ್ಟು ದಾಖಲೆ ಪಡೆದಿದೆ. ಸಿದ್ದರಾಮಯ್ಯ ಅವರ ಪತ್ನಿಗೆ ೧೪ ಸೈಟು ಕೊಟ್ಟಿದೆ. ಮೂಡಾ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ, ಇಡಿ ತನಿಖೆಗೆ ರಾಜ್ಯ ಸರಕಾರದ ಅಧಿಕಾರಿಗಳು ಸಹಕಾರ ಕೊಡಬೇಕು. ಹಾಗೂ ಇದರ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಪ್ರತಿ ಪಕ್ಷದಲ್ಲಿ ಇದ್ದಾಗ ಮಾಡಿದ ಆರೋಪ ಈಗ ಸತ್ಯ ಅನ್ನಿಸೋದಿಲ್ಲವಾ ಎಂದ ಕೇಳಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷಕ ಜನಕ, ಪ್ರೋತ್ಸಾಹಕ ಆಗಿದೆ. ಇದರಿಂದ ಸಿದ್ದರಾಯಮಯ್ಯ ಅವರು ಸ್ವತಃ ರಾಜೀನಾಮೆ ಕೊಡಲು ಮನಸ್ಸಿದ್ದರೂ ಹೈಕಮಾಂಡ್ ಕಾರಣದಿಂದ ರಾಜೀನಾಮೆ ಕೊಡಲಾಗದ ಸ್ಥಿತಿ ಇರಬೇಕು ಎಂದೂ ಲೇವಡಿ ಮಾಡಿದರು.
ಮರ್ಯಾದಗೆಟ್ಟ ಸರಕಾರ, ಸಿದ್ದರಾಮಯ್ಯ ಅವರು ವಾಪಸ್ ಕೊಟ್ಟ ಬಳಿಕ ಹಗರಣ ಮುಗದೋಗತ್ತಾ? ರಾಜ್ಯದ ಜನರಲ್ಲಿ ಭ್ರಮೆ ಸೃಷ್ಟಿಸುವುದು ಬಿಡಬೇಕು. ಕಾಂಗ್ರೆಸ್ ಸ್ಥಿತಿ ಹತಾಶ ಸ್ಥಿತಿ ಆಗಿದೆ. ದ್ವೇಷ ರಾಜಕಾರಣ, ಎಫ್ಐಆರ್, ನ್ಯಾಯಾಲಯದಲ್ಲಿ ಇದೆ. ಇದು ಕಾನೂನು ಕಟ್ಲೆ ಹೆಚ್ಚು ಮಾಡಿಕೊಂಡ ಸರಕಾರ. ಕೇಂದ್ರ ಸಚಿವರ ಮೇಲೆ ಕಾಂಗ್ರೆಸ್ ಬೇಜವಬ್ದಾರಿಯಾಗಿ ಮಾತನಾಡುವುದನ್ನು, ಬಿಜೆಪಿ ನಾಯಕರ ಮೇಲೆ ಮಸಿ ಬಳಿಯುವದನ್ನು ಖಂಡಿಸುತ್ತೇವೆ ಎಂದರು.
ಜನ ವಿರೋಧಿ ಸರಕಾರ ಎನ್ನಲು ಹಾಪ್‌ಕಾಮ್ಸ ಮಳಿಗೆ ಬಂದ್ ಆಗಿದ್ದೂ ಉದಾಹರಣೆ. ರಾಜ್ಯದಲ್ಲಿ ನೂರಾರು ಬಂದ್ ಆಗಿದ್ದಕ್ಕೂ ಸರಕಾರಕ್ಕೆ ಏನು ಹೇಳುತ್ತದೆ ಎಂದೂ ಕೇಳಿದರು.
ಪ್ರಮುಖರಾದ
ಗುರುಪ್ರಸಾದ ಹೆಗಡೆ,
ಶರ್ಮಿಳಾ ಮಾದನಗೇರಿ, ರಮಾಕಾಂತ ಭಟ್ಟ, ಗಣಪತಿ ನಾಯ್ಕ, ನಂದನ ಸಾಗರ, ನಾಗರಾಜ್ ನಾಯ್ಕ, ಆರ್.ವಿ.ಹೆಗಡೆ, ರವಿಕಾಂತ ಶೆಟ್ಟಿ ಇತರರು ಇದ್ದರು.