ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ;ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನೆನಹಳ್ಳಿಯಿಂದ ಸೂರಬೈಲ್ ತನಕ ರಸ್ತೆಗೆ ಎರಡು ವರ್ಷಗಳ ಹಿಂದಷ್ಟೇ ಕಾಂಕ್ರೀಟ್ ಹಾಕಲಾಗಿತ್ತು. ಆದರೆ ರಸ್ತೆ ಅಂಚಿಗೆ ಮಣ್ಣು ಹಾಕಿ ಸರಿಪಡಿಸದೆ ಗುತ್ತಿಗೆದಾರ ನಾಪತ್ತೆಯಾಗಿದ್ದ ಕಾರಣ ರಸ್ತೆ ಅಂಚಿನ ಕೆಲವು ಕಡೆ ಒಂದು ಅಡಿಗೂ ದೊಡ್ಡ ಹಂಡಗಳಿದ್ದವು. ಇದರಿಂದಾಗಿ ವಾಹನ ಸವಾರರು ಕಷ್ಟಪಡುವುದನ್ನು ಕಂಡ ಕನೇನಳ್ಳಿಯ ಅಂಕಣ ಸ್ಥಳದ ರಾಮಚಂದ್ರ ನಾಗೇಂದ್ರ ಹೆಗಡೆ ( Ramachandra Nagendra Hegde) ಎಂಬ ಯುವಕ ತಾನೇ ಸ್ವತಹ ಕಚ್ಚಿನಲ್ಲಿ ರಸ್ತೆ ಎರಡು ಬದಿಯ ಗುಂಡಿಗಳಿಗೆ ಮಣ್ಣು ಹಾಕಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಕೃಷಿಯೊಂದಿಗೆ ಎರಡು ಮಿನಿ ಹಿಟಾಚಿಗಳನ್ನು ಬಾಡಿಗೆಗೆ ಬಿಟ್ಟು ರೈತರ ಕೆಲಸಕ್ಕೆ ನೆರವಾಗುತ್ತಿರುವ ರಾಮಚಂದ್ರ ನಾಗೇಂದ್ರ ಹೆಗಡೆ ರವರು ಇಲ್ಲಿಯ ಜನರ ಬಾಯಲ್ಲಿ ರಾಮು ಎಂದೇ ಪ್ರಸಿದ್ಧರು . (Ramachandra Nagendra Hegade is popularly known as Ramu in the mouth of the people here).  ಅವರು ಮಾಡುತ್ತಿರುವ ಜನ ಮೆಚ್ಚುವ ಕೆಲಸವನ್ನು ತಿಳಿದುಕೊಂಡ ಉಮ್ಮಚೆಗೆ ಗ್ರಾಮ ಪಂಚಾಯತ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ,ಗ್ರಾಮ ಪಂಚಾಯತ್ ಸದಸ್ಯ ಗ ರಾ ಭಟ್ಟ ಹಾಗೂ ಊರಿನವರಾದ ಸುಬ್ರಾಯ್ ಭಾಸ್ಕರ್ ಹೆಗಡೆಯವರೊಂದಿಗೆ ಸ್ಥಳಕ್ಕೆ ಆಗಮಿಸಿ ಯುವಕ ರಾಮು ಹೆಗಡೆಯವರಿಗೆ ಅಭಿನಂದಿಸಿ ನಿಮ್ಮ ಒಳ್ಳೆಯ ಕೆಲಸಕ್ಕೆ ಗ್ರಾಮ ಪಂಚಾಯತಿ ವತಿಯಿಂದ ಕಿಂಚಿತ್ ಸಹಾಯ ಮಾಡುವುದಾಗಿ ತಿಳಿಸಿದರು. ಅಲ್ಲದೆ ಯುವಕರು ನಿಮ್ಮಿಂದ ಸ್ಪೂರ್ತಿ ಪಡೆದು ಪ್ರತಿ ಊರಿನಲ್ಲೂ ಇಂಥ ಜನಪರ ಕೆಲಸಗಳನ್ನು ತೊಡಗಿಕೊಳ್ಳುವಂತಾಗಬೇಕು ಎಂದು ಹೇಳಿದರು.