ಸುದ್ದಿ ಕನ್ನಡ ವಾರ್ತೆ

ಭಟ್ಕಳ: ಕೇಂದ್ರ ಸರ್ಕಾರದಿಂದ ಹೊಸದಾಗಿ ಮಂಜೂರಿಯಾಗಿರುವ ಮುರ್ಡೇಶ್ವರ – ತಿರುಪತಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ರೈಲಿಗೆ ಹೂವು ಹಾರ ಹಾಕಿ ಶಾಸ್ತೊçÃಕ್ತವಾಗಿ ಪೂಜೆ ಸಲ್ಲಿಸಿ ಕೇಂದ್ರ ಸರಕಾರ ಹಾಗೂ ರೈಲ್ವೇ ಸಚಿವರಿಗೆ ಅಭಿನಂದನಾ ಘೋಷಣೆ ಕೂಗಲಾಯಿತು.

ಮುರ್ಡೇಶ್ವರ ತಿರುಪತಿ ರೈಲು ಪ್ರತಿ ಬುಧವಾರ ಮತ್ತು ಶನಿವಾರ ಮುರ್ಡೇಶ್ವರದಿಂದ ಹೊರಡುತ್ತಿದ್ದು ಕಾಚಿಗುಡದಿಂದ ಮಂಗಳವಾರ ಮತ್ತು ಶುಕ್ರವಾರ ಹೊರಡಲಿದೆ. ಶನಿವಾರ ಸಂಜೆ ಮುರ್ಡೇಶ್ವರದಿಂದ ಹೊರಟ ರೈಲು ಭಟ್ಕಳ ನಿಲ್ದಾಣ ತಲುಪುತ್ತಿರುವಂತೆಯೇ ನೂರಾರು ಸಾರ್ವಜನಿಕರು ಸೇರಿ ರೈಲಿಗೆ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಲಕ್ಷಿö್ಮÃನಾರಾಯಣ ನಾಯ್ಕ, ಪಾಂಡುರAಗ ನಾಯ್ಕ, ಬಾಬಾನಂದ ಪೈ, ವಿನಾಯಕ ಪೈ, ಉದಯ ಪ್ರಭು, ಜಗದೀಶ ನಾಯ್ಕ, ಶೇಷಗಿರಿ ನಾಯ್ಕ ಸೇರಿದಂತೆ ಸಾರ್ವಜನಿಕರು, ರೈಲ್ವೇ ಹೋರಾಟ ಸಮಿತಿ ಸದಸ್ಯರು, ರೈಲ್ವೇ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.