ಸುದ್ದಿ ಕನ್ನಡ ವಾರ್ತೆ

ಶಿರಸಿ: ಮಕ್ಕಳಲ್ಲಿ ಛಲ, ಗುರಿ ಇದ್ದರೆ ಸಾಧನೆ ಸಾಧ್ಯವಿದೆ
ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಬೆಳಗಾವಿ ವಿಭಾಗದ ಎಂಟು ಜಿಲ್ಲೆಗಳಿಂದ ಆಗಮಿಸಿದ ೧೪ ಹಾಗೂ ೧೭ ವರ್ಷದ ವಯೋಮಾನದೊಳಗಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಶುಕ್ರವಾರ ಅರಣ್ಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದದರು.

ಇಲ್ಲಿ ಪಾಲ್ಗೊಂಡ ಕ್ರೀಡಾ ಪ್ರತಿಭೆಗಳು ಮುಂದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ದೇಶದ ಪ್ರತಿಭೆಗಳಾಗಬೇಕು. ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು. ಕ್ರೀಡೆಗೆ ಕೂಡ ಆದರದ್ದೇ ಆದ ಮಹತ್ವ ಇದೆ ಎಂದರು.

ಶಿಕ್ಷಣ ಜೊತೆ ಸಂಸ್ಕಾರ ಬೇಕು. ಕ್ರೀಡೆಗೆ, ಕಲೆಗೂ ಅದರದ್ದೇ ಆದ ಮಹತ್ವ ಇದೆ. ಪ್ರತಿಭೆ ಸರಿಯಾದ ಮಾರ್ಗದಲ್ಲಿ ನಡೆದರೆ ಫಲ‌ ಸಿಕ್ಕೇ ಸಿಗುತ್ತದೆ ಎಂದ ಅವರು, ಶಟ್ಲ ಬ್ಯಾಡ್ಮಿಂಟನ್ ದೇಹ ದಂಡಿಸುವ ಜೊತೆಗೆ ಬುದ್ದಿವಂತಿಕೆ ಆಟವಿದೆ. ಸ್ಪರ್ಧಾ ಮನೋಭಾವದಿಂದ ಆಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ‌ ಮಾದನಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಹಾಯಕ ಆಯುಕ್ತೆ ಕಾವ್ಯರಾಣಿ, ಡಿಡಿಪಿಐ ಬಸವರಾಜ ಪಿ., ತಹಸೀಲ್ದಾರ ಶ್ರೀಧರ ಮುಂದಲಮನಿ, ಕೆ.ಎನ್.ಹೊಸ್ಮನಿ, ಬಿಇಓ ನಾಗರಾಜ ನಾಯ್ಕ, ನಾರಾಯಣ ದಾಯಿಮನೆ, ಕಿರಣ ನಾಯ್ಕ, ಬಾಲಚಂದ್ರ ಪಟಗಾರ ಇತರರು ಇದ್ದರು.