ಸುದ್ದಿ ಕನ್ನಡ ವಾರ್ತೆ
ಶಿರಸಿ: ಕಳೆದ ವರ್ಷದ ಆಗಷ್ಟ್ ೨೦ ರಂದು ನಡೆದಿದ್ದ ರಾಜ್ಯದ ಪ್ರಸಿದ್ಧ ಸಹಕಾರಿ ಸಂಸ್ಥೆ ಟಿಎಸ್ ಎಸ್ ನಿರ್ದೇಶಕ ಸ್ಥಾನಕ್ಕೆ ಹಿರಿಯ ಸಹಕಾರಿ ಟಿಆರ್ಸಿ ಸಹಕಾರಿ ಸಂಸ್ಥೆ ಅಧ್ಯಕ್ಷರೂ ಆದ ರಾಮಕೃಷ್ಣ ಹೆಗಡೆ ಕಡವೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಈಗಿನ ಆಡಳಿತ ಮಂಡಳಿಗೆ ರೈತಪರವಾದ ಕಾಳಜಿ ಇಲ್ಲವಾಗಿದೆ. ಸಂಸ್ಥೆಯೊಳಗಿನ ವಯಕ್ತಿಕ ಮಾಹಿತಿ ಕೂಡ ಬೇರೆಯವರಿಗೆ ನೀಡಲಾಗಿದೆ. ನನ್ನ ಒಬ್ಬನನ್ನೇ ಗುರಿಯಾಗಿಸಿಕೊಂಡು ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗಿದೆ. ಕಳೆದ ವರ್ಷದಿಂದ ಪ್ರತಿ ಮೀಟಿಂಗ್ ಠರಾವು ಕೂಡ ನಿರ್ದೇಶಕನಾಗಿ ನನಗೆ ನೀಡಿಲ್ಲ. ಈಗಿನ ಆಡಳಿತ ಮಂಡಳಿಯ ದ್ವೇಷದ ರಾಜಕಾರಣಕ್ಕೆ ಮನ ನೊಂದು ರಾಜೀನಾಮೆ ನೀಡುವದಾಗಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.