ಸುದ್ಧಿಕನ್ನಡ ವಾರ್ತೆ
ಹುಬ್ಬಳ್ಳಿ: ಬೆಂಗಳೂರಿನಿಂದ ಗೋಕರ್ಣಕ್ಕೆ ಬರುತ್ತಿದ್ದ ಖಾಸಗಿ ಬಸ್ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಶಿಗ್ಗಾವಿಯ ಮಹಮ್ಮದ್ ರಫಿಕ್(35) ಚಿಕಿತ್ಸೆ ಫಲಕಾರಿಯಾಗದೆಯೇ ಹುಬ್ಬಳ್ಳಿಯ ಕೆಎಂಸಿ ಆರ್ ಐ ನಲ್ಲಿ ಮೃತಪಟ್ಟಿದ್ದಾನೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ಖಾಸಗಿ ಬಸ್ ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವರಗೊಂಡನಹಳ್ಳಿ ಬಳಿ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ 3.30 ಕ್ಕೆ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 18 ಜನರು ಸಜೀವ ದಹನವಾಗಿದ್ದರು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈತ ಚಿಕಿತ್ಸೆ ಫಲಕಾರಿಯಾಗದೆಯೇ ಕೊನೆಯುಸಿರೆಳೆದಿದ್ದಾನೆ.
ಈ ಬಸ್ ನಲ್ಲಿ 29 ಜನ ಪ್ರಯಾಣಿಕರಿದ್ದರು. ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಬಸ್ ಗೆ ಟ್ರಕ್ ಡಿವೈಡರ್ ದಾಟಿ ಬಂದು ಡಿಕ್ಕಿ ಹೊಡೆದಿತ್ತು, ಈ ಭೀಕಕರ ಅಪಘಾತದಲ್ಲಿ ಬಸ್ ಗೆ ಬೆಂಕಿ ಹೊತ್ತಿಕೊಂಡು ಇಡೀ ಬಸ್ ಸುಟ್ಟು ಭಸ್ಮವಾಗಿತ್ತು. ಈ ದುರ್ಘಟನೆಯು ದೇಶದ ಜನತೆಯನ್ನೇ ಬೆಚ್ಚಿ ಬೀಳಿಸಿದೆ.
