ಸುದ್ಧಿಕನ್ನಡ ವಾರ್ತೆ
ಜೊಯಿಡಾ: ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನನಲ್ಲಿ 2003 ಕ್ಕೂ ಮೊದಲು ಸುಮಾರು 25 ವರ್ಷ ಎಲ್ಲೆಂದರಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಅನೇಕ ಚಟುವಟಿಕೆ ನಡೆದಿತ್ತು. ಆ ಸಮಯದಲ್ಲಿ ಪ್ರಚಲಿತದಲ್ಲಿ ಅನೇಕ ಮ್ಯಾಂಗನೀಸ್ ಗಣಿ ಕಾಣಿ ನದಿಗೆ ಅಣೇಕಟ್ಟೆ,ಬಿದಿರುಕಡಿತೆಲೆ ಕಂಪಾರ್ಟಮೆಂಟ್ (ಮರಕಡಿತ) ಸಾಗವಾನಿ ನಡುತೋಪು ಇವೆ ಮುಂದಾದವುಗಳ ಜತೆಗೆ ಮರದ ಚೌಕಟಿ ತೆಗೆಯುವುದು(ರೈಲ್ವೆ ಹಳಿಗಾಗಿ ಶಿಲಿಪಾರ್) ತಾರಿಮರದ ಕಡಿತಲೆ, ಹೀಗೆ ಹತ್ತು ಹಲವಾರು ಯೋಜನೆಯಿಂದ ಪರಿಸರ ಜರ್ಜರಿತವಾಗಿತ್ತು. ಆ ಸಮಯದಲ್ಲಿಯೇ ಉಪಾಯ ಇಲ್ಲದೆ ನ್ಯಾಶನಲ್ ಪಾರ್ಕ ಅಣಶಿ ಮತ್ತು ದಾಂಡೇಲಿ ಅರಣ್ಯ ಧಾಮಗಳನ್ನು ಇಲ್ಲಿನ ಜನತೆ ಒಪ್ಪಿಕೊಂಡರು. ಈ ಕುರಿತಂತೆ ಜಿಲ್ಲಾ ಭಾರತೀಯ ಕಿಸಾನ ಸಂಘದ ಉಪಾಧ್ಯಕ್ಷರಾದ ಗೋಪಾಲ್ ಭಟ್ ಶಿವಪುರ ರವರು ಸುದ್ಧಿಕನ್ನಡ ವಾಹಿನಿಗೆ ಸಮಸ್ಯೆಯ ಸವಿಸ್ತಾರ ಮಾಹಿತಿ ನೀಡಿದ್ದಾರೆ.
ರಸ್ತೆ ಮಾಡಲೂ ಅಸಾಧ್ಯದ ಪರಿಸ್ಥಿತಿ…!
ಆ ಸಂದರ್ಭದಲ್ಲಿ ಜನರಿಗೆ ಕೊಡಬೇಕಾದ ಪರಿಹಾರ,ಪುನರ್ವಸತಿ, ಪ್ರಸ್ತಾಪ ಇಲ್ಲದೆ ಜನರ ಹಕ್ಕಿಗೆ ತೊಂದರೆಯಾಗದಂತೆ ಜಾರಿಗೊಳಿಸಲಾಯಿತು. ಸದ್ಯ ದಾಂಡೇಲಿ ಟೈಗರ್ ರಿಸರ್ವ ಅಂತ ಘೋಷಣೆಯಾಗಿ ಪ್ರಾಣಿ ಪಕ್ಷಿಗಳಿಂದ ಹಸಿರುಗಳಿಂದ ತುಂಬಿಕೊಂಡಿದೆ. ಆದರೆ ಇಲ್ಲಿ ವಾಸಿಸುತ್ತಿರುವ ಮೂಲ ನಿವಾಸಿಗರಿಗೆ ಮೂಲಭೂತ ಸೌಕರ್ಯಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಬೇಸರವಾಗಿದೆ. ಒಂದು ಸಣ್ಣ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕಾದರೂ ಕೇಂದ್ರ ಸರ್ಕಾರದ ವರೆಗೆ ಕಳಿಸಿ ಒಪ್ಪಿಗೆ ಪಡೆದು ಪರವಾನಗಿ ಪಡೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಸಣ್ಣ ಅತಿಸಣ್ಣ ರೈತರ ಅರಣ್ಯ ಅತಿಕ್ರಮಣವನ್ನು ಕೂಡ ಮಂಜೂರಿ ಕೊಡದೆಯೇ ಖುಲ್ಲಾಪಡಿಸಿ ಬೀದಿಗೆ ತಳ್ಳುವ ಪರಿಸ್ಥಿತಿ ಉಂಟಾಗಿದೆ. ಸುಪ್ರಿಂ ಕೋರ್ಟ ಆದೇಶದ ಕಾರಣ ಬುಡಕಟ್ಟು ಮತ್ತು ಇತರ ಅರಣ್ಯ ವಾಸಿಗರ ಅರಣ್ಯದ ಮೇಲಿನ ಹಕ್ಕನ್ನು ಮಾನ್ಯ ಮಾಡುವ ಕೇಂದ್ರ ಕಾನೂನು 2006-27 ಮತ್ತು 2008-2012 ಇವೆಲ್ಲವುಗಳ ಸಹ ಸ್ವತಂತ್ರ್ಯಾಪೂರ್ವದಿಂದಲೂ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಉದ್ದೇಶ ಇಟ್ಟು ರಚಿಸಿದ ಕಾನೂನುಗಳಾಗಿದ್ದು ಇನ್ನಾವಗಲೂ ಕೊಡಲು ಸಾಧ್ಯವಿಲ್ಲ ಅಂತಾನೇ ಉಲ್ಲೇಖಿಸಲಾಗಿದೆ.
ಎ ಮತ್ತು ಬಿ ಅಲ್ಲದೆಯೇ ಸಮುದಾಯದ ಉದ್ದೇಶಿತ 3/2 ಹಕ್ಕುಗಳಂತೂ ನಮ್ಮ ಈಗಿನ ಸಮಸ್ಯೆಯನ್ನು 75 ರಷ್ಟು ಬಗೆಹರಿಯಬಹುದಾದಂತಹದ್ದು ಆಗಿದೆ. ಹಳ್ಳಿಗಳಿಂದ ಸರ್ವ ಋತು ಸಂಪರ್ಕ ರಸ್ತೆಗಳಿದ್ದರೆ ಆಸ್ಪತ್ರೆ,ಶಿಕ್ಷಣ,ಪಂಚಾಯತ, ರೇಷನ್ ಮುಂದಾವುಗಳಿಗೆ ವಾಹನದಲ್ಲಿ ಓಡಾಡಬಹುದು. ಹಾವು,ಚಿರತೆ, ಹುಲಿ, ಕರಡಿ,ಆನೆ,ಹಂದಿ ಇವೆಲ್ಲ ಪ್ರಾಣಿಗಳಿಂದ ತೊಂದರೆ ಬಹಳ ಕಡಿಮೆಯಾಗುತ್ತದೆ. ಮಾನವ,ಪ್ರಾಣಿ,ಅಧಿಕಾರಿಗಳ ಸಂಘರ್ಷ ಕಡಿಮೆಯಾಗಲಿದೆ.
ಸರ್ಕಾರ ಜನರನ್ನು ಮೂಖರನ್ನಾಗಿಸಿದೆಯೇ…?
ಯಾವುದೇ ಪರಿಹಾರ ಕೊಡದೆಯೇ ನೊಟಿಫಿಕೇಶ್ ಪೂರ್ವದ ಪ್ರೊಸಿಜರ್ ಗಳನ್ನು ಸಹ ಸರಿಯಾಗಿ ಮಾಡದೆಯೇ ಸರ್ಕಾರ ತನ್ನ ಒಪ್ಪಿಗೆ ಕೊಟ್ಟು ತನ್ನ ಹಕ್ಕನ್ನು ಬಿಟ್ಟುಕೊಟ್ಟು ಜನರನ್ನು ಮೂರ್ಖರನ್ನಾಗಿಸಿದೆಯೇ…? ಎಂದು ಪ್ರಶ್ನೆ ಎದುರಾಗಿದೆ. ಸರ್ಕಾರದ ಕರ್ತವ್ಯಗಳನ್ನು ಮಾಡಿಸಿಕೊಳ್ಳುವ ಸಾಮಥ್ರ್ಯ ಜನರಿಗೆ ಸರಿಯಾದ ಸಮಯದಲ್ಲಿ ಸರ್ಕಾರ ಜನರ ಪರವಾಗಿ ಕೆಲಸವನ್ನು ಮಾಡಿದ್ದೇ ಆದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಈಗ ಇರುವುದು ದಿನ ತಳ್ಳುವ ಕೆಲಸವೇ ಹೊರತು ಬೇರೆ ಏನೂ ಸಾಧ್ಯವಿಲ್ಲದ ಪರಿಸ್ಥಿತಿ ಮತ್ತು ಒಲ್ಲ ಮನಸ್ಸಿನಿಂದ ಕರ್ತವ್ಯ ಮಾಡಿ ಮುಗಿಸುವಾಗ ಕಣ್ಣೀರಿಡುವ ಸ್ಥಿತಿ ಆದರೂ ಬೈಗುಳ ಮಾತ್ರ ನಿರಂತರ ಅಧಿಕಾರಿಗಳ ಪಾಲಿಗೆ ಉಳಿದುಕೊಳ್ಳುತ್ತದೆ. ಸರ್ಕಾರಗಳು ಕರ್ತವ್ಯ ಮರೆತರೆ ಜನರ ಪಾಡು ನಾಯಿಪಾಡು. ಬೇಡ್ತಿ,ಸಘನಾಶಿನಿ,ಕೊಳ್ಳ ಸಂರಕ್ಷಣಾ ಸಮೀತಿಯವರು ಆಗಿನ ನಮ್ಮ ಪರಿಸ್ಥಿತಿಯನ್ನು ಅವರು ಅನುಭವಿಸುವಂತಾಗದಿರಲಿ ಎಂಬುದು ಗೋಪಾಲ್ ಭಟ್ ರವರ ಮನವಿಯಾಗಿದೆ.
ಜನರು ಸರ್ಕಾರದ ಬಳಿ ಕೇಳುವುದು ಇಷ್ಟೆ ಪ್ರತಿ ಮನೆಗೂ ಸಂಪರ್ಕಕ್ಕೆ ಉತ್ತಮ ರಸ್ತೆ,Àಸಮರ್ಪಕ ವಿದ್ಯುತ್ ಪೂರೈಕೆ. ಹಳ್ಳಿಯಲ್ಲಿ ಸೂಕ್ತ ಸಂಪರ್ಕಕ್ಕೆ ಉತ್ತಮ ರಸ್ತೆಯನ್ನೂ ನಿರ್ಮಿಸಿಕೊಡಲು ಅಸಾಧ್ಯಕ್ಕೆ ಕಾರಣವೇನು…? ಎಂಬುದು ಕೂಡ ಪ್ರಶ್ನೆಯಾಗಿದೆ.
