ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಗೆಳತಿಯರೊಂದಿಗೆ ಗೋಕರ್ಣ ಪ್ರವಾಸಕ್ಕೆ ತೆರಳಿದ್ದ ಭಟ್ಕಳ ಮೂಲದ ಸಾಫ್ಟ್ವೇರ್ ಇಂಜಿನಿಯರ್ ರಶ್ಮಿ ಮಹಾಲೆ ಅವರು ಭೀಕರ ಬಸ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ . ಬೆಂಗಳೂರಿನ ಖಾಸಗಿ ಕಂಪನಿಯೊAದರಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ, ಪ್ರವಾಸಕ್ಕಾಗಿ ಪಟ್ಟು ಹಿಡಿದು ರಜೆ ಪಡೆದು ಹೊರಟಿದ್ದರು ಎನ್ನಲಾಗಿದೆ.
ನಾಲ್ಕು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ರಶ್ಮಿ ಅವರು ಸೋಮವಾರದವರೆಗೆ ರಜೆ ನೀಡುವಂತೆ ತಮ್ಮ ಕಂಪೆನಿಯ ಮ್ಯಾನೇಜರ್ ಬಳಿ ಕೇಳಿದ್ದರು. ಮೊದಲು ರಜೆ ನೀಡಲು ನಿರಾಕರಿಸಿದ್ದ ಮ್ಯಾನೇಜರ್ ಬಳಿಕ ರಶ್ಮಿಯವರ ಒತ್ತಾಯದ ಮೇರೆಗೆ ರಜೆ ಮಂಜೂರು ಮಾಡಿದ್ದರು ಎಂದು ತಿಳಿದು ಬಂದಿದೆ. ಅದರಂತೆ ಬುಧವಾರ ಸಂಜೆ ತನ್ನ ಕಂಪೆನಿಯ ಕೆಲಸದ ಅವಧಿಯ ನಂತರ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದರು. ಇದರಲ್ಲಿ ಇಬ್ಬರು ಯುವತಿಯರಾದ ಗಗನ ಮತ್ತು ರಕ್ಷಿತಾ ಗ್ರೇಟ್ ಎಸ್ಕೆಪ್ ಆಗಿದ್ದಾರೆ. ಎನ್ನಲಾಗಿದೆ.
ಆದರೆ ರಶ್ಮಿ ಮಹಾಲೆ ಅವರು ಈ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಂತಸದಿAದ ತನ್ನ ಗೆಳತಿಯರಿಗೆ ಗೋಕರ್ಣ, ಮುರ್ಡೇಶ್ವರದ ದರ್ಶನ ಮಾಡಿಸಿ ತಮ್ಮ ಮನೆಗೆ ಕರೆದುಕೊಂಡು ಬರಬೇಕು ಎನ್ನುವ ಆಸೆಯನ್ನಿಟ್ಟುಕೊಂಡು ಹೊರಟಿದ್ದ ರಶ್ಮಿಯವರೇ ಬಸ್ ದುರಂತದಿAದಾಗಿ ಸಾವನ್ನಪ್ಪಿದ್ದಾರೆ.♦
