ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ಕರ್ನಾಟಕ ದ ಹಳ್ಳಿಗರ ಸ್ಥಿತಿ ಈಗ ಯಾರಿಗೂ ಬೇಡ ಎಂಬಂತಾಗಿದೆ ಪ್ರತಿ ದಿನ ಒಂದಲ್ಲಒಂದು ಕಡೆ ಆನೆ ಧಾಳಿ, ಹುಲಿ ಧಾಳಿ, ಚಿರತೆ ಧಾಳಿಕರಡಿ ಧಾಳಿ ಹಂದಿ ಧಾಳಿ ಹೀಗೆ ಕಾಡು ಪ್ರಾಣಿಗಳೆಲ್ಲ ಜನರ ಮೇಲೆರಗುತ್ತಿವೆ.

ಇದರಿಂದ ಕೃಷಿಕರಿಗೆ ಇತರ ಜನರಿಗೆ ಬದುಕುವುದೇ ಕಷ್ಟ ಕರ ವಾಗಿದೆ ಬೆಳೆದ ಬೆಳೆ ಗಳೂ ಕೂಡ ಸರ್ವ ನಾಶವಾಗುತ್ತಿವೆ ಇದನ್ನು ನೋಡಿ ಯೂ ಏನೂ ಮಾಡಲು ಸಾಧ್ಯ ವಿಲ್ಲದ ಸ್ಥಿತಿಗೆ ರೈತರು ಬಂದಿದ್ದಾರೆ ಕಾಡಿನಿಂದ ನಾಡಿಗೆಬಂದು ಮಾನವ ರೊಂದಿಗೆ ಸಂಘರ್ಷ ಮಾಡುವ ಕಾಡು ಪ್ರಾಣಿ ಗಳ ನಿಗ್ರಹಣೆ ಅರಣ್ಯ ಇಲಾಖೆ ಇಂದ ಆಗದ ಮಾತು, ಧಾಳಿ ನಡೆದ ಮೇಲೆ ಮಾಡುವ ಕೆಲಸ ದಿಂದ ಯಾವುದೇ ಹೋದ ಜೀವ ಬರುವುದಿಲ್ಲ, ಪ್ರಾಣಿಗಳ ಆವಾಸ ಸ್ಥಳ ಈಗ ಅರಣ್ಯ ಇಲಾಖೆ ಯವರ ಕಾವಲು ಕೇಂದ್ರ ಇಲ್ಲವೇ ರೆಸಾರ್ಟ್ ಗಳಾಗಿವೆ, ಇದರಿಂದಾಗಿ ಕಾಡು ಪ್ರಾಣಿಗಳಿಗೆ ವಸತಿಯ ಸಮಸ್ಯೆ ಆಗಿದೆ ಕಾಡು ಪ್ರಾಣಿಗಳ ಆವಾಸ ಸ್ಥಳ ಗಳಿಗೆ ಪ್ರವಾಸೋದ್ಯಮ ಇಲಾಖೆ ಯವರಾಗಲಿ ಇತರ ಯಾರೇ ಆಗಲಿ ಯಾವುದೇ ಕಾರಣಕ್ಕೂ ಪ್ರವೇಶ ಮಾಡದಂತೆ ಅರಣ್ಯ ಇಲಾಖೆ ನೋಡಿ ಕೊಳ್ಳಬೇಕು ಇಲಾಖೆಯವರೂ ಕೂಡ ಅಲ್ಲಿ ಯ ಪ್ರವೇಶ ವನ್ನು ನಿಷೇದಿಸಬೇಕು ಅಂದರೆ ಮಾತ್ರ ಜನರ ವಸತಿಯತ್ತ ಪ್ರಾಣಿಗಳು ಬರುವ ಪ್ರಮಾಣ ಕಡಿಮೆ ಆಗಬಹುದು ಎಂಬ ಮಾತು ಸಾರ್ವಜನಿಕ ರಿಂದ ಕೇಳಿಬಂದಿದೆ.

ಸದ್ಯ ದ ಸ್ಥಿತಿ ಯಲ್ಲಿ ಮನೆಯ ಬಳಿ ಮಲಗಿದ ನಾಯಿ ಯನ್ನು ಚಿರತೆ ಹೊತ್ತೋಯ್ಯುತ್ತಿದೆ, ಆನೆ ಗಳು ಬತ್ತ ಕಬ್ಬಿನ ಗದ್ದೆ ನಾಶ ಮಾಡುತ್ತಿವೆ ಕರಡಿ ರೈತನ ಮೇಲೆ ಎರಗುತ್ತಿವೆ, ಹುಲಿ ಗಳು ಎಮ್ಮೆ ಎತ್ತು ಗಳನ್ನು ಕೊಲ್ಲುತ್ತಿವೆ, ಒಂದೇ ಎರಡೇ ಪ್ರತಿ ದಿನ ಒಂದಲ್ಲ ಒಂದು ಕಡೆ ಕಾಡು ಪ್ರಾಣಿಗಳ ಧಾಳಿ ನಡೆಯುತ್ತಲೇ ಇದೆ.ಆದರೆ ಅರಣ್ಯ ಇಲಾಖೆ ಮಾತ್ರಜಾಣಕುರುಡುತನ ತೋರಿಸುತ್ತಿದೆ ಹೀಗಾಗಿಜನರ ಬದುಕು ಮೂರಾ ಬಟ್ಟೆಯಂತೆ ಆಗಿದೆ.

ಅದೇ ರೀತಿ ಸಾಕಷ್ಟು ಕಾಡು ಪ್ರಾಣಿಗಳೂ ಕೂಡ ಸಾಯುತ್ತಿವೆ 30 ಕ್ಕೂ ಹೆಚ್ಚು ಕೃಷ್ಣ ಮೃಗಗಳು ಮೃಗಾಲಯದಲ್ಲಿ ಸತ್ತಿವೆ ಐದು ಹುಲಿಗಳು ಸತ್ತಿವೆ ಅಲ್ಲಲ್ಲಿ ಹತ್ತಾರು ಆನೆ ಗಳು ಸತ್ತಿವೆ ಇತ್ತೀಚೆಗೆ ವಿವಿಧ ಕಾರಣ ಗಳಿಂದ ಪ್ರತಿ ದಿನ ಪ್ರಾಣಿಗಳು ಸಾಯುತ್ತಲೇ ಇವೆ ಇತ್ತೀಚಿಗೆ ಮತ್ತೆ ಮೂರು ಕೃಷ್ಣ ಮೃಗ ಗಳು ಸತ್ತಿವೆ ಆದರೆ ಅರಣ್ಯ ಇಲಾಖೆ ಮಾತ್ರ ಇದಕ್ಕೆಲ್ಲ ಕಾರಣ ಗೊತ್ತಿಲ್ಲ ದವರಂತೆ ವರ್ತಿಸುವ ಕಾರಣ ಮಾತ್ರ ನಿಗೂಢವಾಗಿದೆ ಉತ್ತರ ಕನ್ನಡ ದಕ್ಷಿಣ ಕನ್ನಡ, ಮೈಸೂರು, ಹಾಸನ, ಕೊಡಗು, ಚಿಕ್ಕ ಮಗಳೂರು ಸೇರಿದಂತೆ ಈ ಜಿಲ್ಲೆಗಳ ಕೃಷಿಕರಿಗೆ ಮಾತ್ರ ಸಾಕಪ್ಪ ಸಾಕು ಬದುಕು ಎನ್ನುವಷ್ಟು ಕಷ್ಟ ಕಾಡು ಪ್ರಾಣಿಗಳಿಂದ ಆಗುತ್ತಿದೆ. ಇದಕ್ಕೆ ಆದಷ್ಟು ಬೇಗನೇ ಸರಕಾರ ಒಂದು ದಾರಿ ಕಂಡು ಹಿಡಿಯಲೇ ಬೇಕಾಗಿದೆ ಆ ಮೂಲಕ ಅರಣ್ಯ ಇಲಾಖೆ ಗೆ ಸೂಕ್ತ ಮಾಹಿತಿ ನೀಡಿ ಜನರ ಬದುಕಿಗೆ, ಪ್ರಾಣಿಗಳ ಉಳಿವಿಗೆ ದಾರಿ ತೋರಿಸಲೇ ಬೇಕಾಗಿದೆ. ಇಲ್ಲ ವಾದರೆ ಸಾರ್ವಜನಿಕರ ಬದುಕು ಇನ್ನಷ್ಟು ಕಷ್ಟಕರ ವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.