ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಹಳಿಯಾಳ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಜಲಪಾತ ಒಂದರಲ್ಲಿ ಮುಳುಗಿ ನಾಪತ್ತೆಯಾದ ಘಟನೆ ನಡೆದಿದೆ.

ಹಳಿಯಾಳದಿಂದ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ತಂಡದಲ್ಲಿ ಓರ್ವ ನೀರುಪಾಲಾದ ಘಟನೆ ಯಲ್ಲಾಪುರ ತಾಲೂಕಿನ ಮಲವಳ್ಳಿ ಸಮೀಪದ ಕಾನೂರು ಜಲಪಾತದಲ್ಲಿ ಮಂಗಳವಾರ ನಡೆದಿದೆ.

ಧಾರವಾಡದ ಸೋಹಿಲ್ ಸೈಯದಾಲಿ ಶೇಖ್ (೨೧ ವರ್ಷ)ನೀರಿನಲ್ಲಿ ಬಿದ್ದು ಕಾಣೆಯಾದವನಾಗಿದ್ದಾನೆ. ಹಳಿಯಾಳದ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾನೂರು ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು.ನೀರಿನಲ್ಲಿ ಆಟವಾಡಲು ಹೋದಾಗ ಸೋಹಿಲ್ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದ್ದಾನೆ.ನಂತರ ಮೇಲೇಳಲಿಲ್ಲ ಎನ್ನಲಾಗಿದೆ.

ಯಲ್ಲಾಪುರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು  ನಾಪತ್ತೆಯಾದ ವಿದ್ಯಾರ್ಥಿ ಗಾಗಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.