ಸುದ್ದಿಕನ್ನಡ ವಾರ್ತೆ
ಉತ್ತರಕನ್ನಡ: ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಯಕ್ಷಗಾನವು ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯತ ಪ್ರಮುಖವಾದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೇರಳ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ. ಉತ್ತರಕನ್ನಡ ಜಿಲ್ಲೆ ಕಲೆ ಮತ್ತು ಸಂಸ್ಕøತಿಯ ಬೀಡಾಗಿದೆ. ಜಿಲ್ಲೆಯ ರಂಗ ಕಲೆಗಳಲ್ಲಿ ಯಕ್ಷಗಾನ ವಿಶಿಷ್ಠ ಸ್ಥಾನ ಗಳಿಸಿದೆ.

ಯಕ್ಷಗಾನದ ಪ್ರಾಚೀನತೆ…
ಯಕ್ಷಗಾನದ ಪ್ರಾಚೀನತೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವದಿಲ್ಲವಾದರೂ ಭರತ ಮುನಿಯ ನಾಟ್ಯ ಶಾಸ್ತ್ರದಲ್ಲಿ ಅಲ್ಲಲ್ಲಿ ತೋರಿ ಬರುವ ಕೆಲವು ಆಧಾರಗಳಿಂದ ಈ ಕಲೆಯು ಬಹಳ ಹಿಂದಿನಿಂದಲೂ ಇತ್ತೆಂಬುದು ಸ್ಪಷ್ಟವಾಗುತ್ತದೆ. ಯಕ್ಷಗಾನವು ನಾಲ್ಕು ಕಲಾ ಮಾಧ್ಯಮಗಳಿಂದ ಮೈಗೂಡಿ ನಿಂತ ಒಂದು ಸಮ್ಮಿಶ್ರ ಕಲೆ. ಇದರಲ್ಲಿ ಸಂಗೀತ,ಸಾಹಿತ್ಯ, ನೃತ್ಯ, ಮತ್ತು ಚಿತ್ರ. ಈ ನಾಲ್ಕು ಕಲೆಗಳ ಔಚಿತ್ಯಪೂರ್ಣ ಸಾಮರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳಿವೆ. ಮೊದಲನದೇಯಕ್ಕೆ ಪೂರ್ವರಂಗ ಅಥವಾ ಸಭಾಲಕ್ಷಣ ಎನ್ನುವರು, ಎರಡನೇಯದು ಆರಸಿಕೊಂಡ ಕಥಾ ಭಾಗ.

ಉತ್ತರಕನ್ನಡದಲ್ಲಿ ಯಕ್ಷಗಾನದಲ್ಲಿ ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಗಜಾನನ ಹೆಗಡೆ, ಪಿ.ವಿ ಹಾಸ್ಯಗಾರ, ನಾರಾಯಣ ಹಾದ್ಯಗಾರ, ಕೃಷ್ಣ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮೂರುರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಶಿರಳಗಿ ಭಾಸ್ಕರ್ ಜೋಶಿ, ಬಳ್ಳುರು ಕೃಷ್ನಯಾಜಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗ್ವತ್, ನೆಲ್ಲೂರು ನಾರಾಯಣ ಭಾಗ್ವತ್, ಹಿಲ್ಲೂರು ರಾಮಕೃಷ್ಣ ಹೆಗಡೆ ಸೇರಿದಂತೆ ಹತ್ತಾರು ಕಲಾವಿದರು ಯಕ್ಷಗಾನ ಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇನ್ನೂ ಹೊಸ ಹೊಸ ಪ್ರತಿಭೆಗಳು ಅರಳುತ್ತಿರುವುದು ಕೂಡ ನಮ್ಮ ಯಕ್ಷಗಾನ ಪ್ರೇಮಿಗಳಿಗೆ ಸಂತಸದ ಸಂಗತಿಯೇ ಆಗಿದೆ.

ಮೇರು ಕಲೆ ಯಕ್ಷಗಾನ ಕಲಾವಿದರಾದ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ರವರಿಗೆ ಜಾನಪದಶ್ರೀ ಪ್ರಶಸ್ತಿ ಬಂದಿದೆ. ಇಷ್ಟೇ ಅಲ್ಲದೆಯೇ ತಾಳಮದ್ದಲೆ ಹಿರಿಯ ಕಲಾವಿದರೂ ಇದ್ದಾರೆ.