ಸುದ್ಧಿಕನ್ನಡ ವಾರ್ತೆ
ಉತ್ತರಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಳೆಗಾಲದಲ್ಲಿ ಕೆಲವೆಡೆ ಹಾಳಾದ ರಸ್ತೆಯಲ್ಲಿ ಓಡಾಟ ನಡೆಸುವುದೆಂದರೆ ಸಾಹಸವೇ ಆಗಿದೆ. ಶಿರಸಿಯಿಂದ ದೇವನಳ್ಳಿ ಮೂಲಕ ಯಾಣ-ಗೋಕರ್ಣ- ಅಂಕೋಲಾ-ಕಾರವಾರಕ್ಕೆ ಹೋಗುವ ಪ್ರಯಾಣಿಕರು ಮಾರ್ಗವನ್ನು ಬದಲಿಸಿಕೊಳ್ಳುವುದು ಒಳಿತು.
ಹೌದು ಈ ರಸ್ತೆಯಲ್ಲಿ ಯಾಣದಕ್ರಾಸ್ ಬಳಿ ಸ್ವಲ್ಪ ಜಾಗದಲ್ಲಿ ಭೂಮಿ ಸಡಿಲವಾಗಿ ವಾಹನಗಳು ಹುಗಿದು ನಿಲ್ಲುತ್ತಿವೆ, ದ್ವಿಚಕ್ರವಾಹನಗಳು ಹೋಗಬಹುದಾಗಿದ್ದರೂ ಎಚ್ಚರ ಅಗತ್ಯ. ಈ ಮಾರ್ಗದಲ್ಲಿ ಬಂದು ವಾಹನ ಸಿಲುಕಿಕೊಂಡು ಹಲವರು ಪರದಾಡಿದ ದೃಶ್ಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದಾಗಿ ಈ ಮಾರ್ಗವಾಗಿ ಓಡಾಟ ನಡೆಸುವವರು ಎಚ್ಚರ ವಹಿಸಿ.
ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತು ಈ ಮಾರ್ಗದಲ್ಲಿ ಹಾಳಾಗಿರುವ ಸ್ಥಳದಲ್ಲಿ ಒಂದಿಷ್ಟು ಕಡಿಯನ್ನಾದರೂ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಈ ಭಾಗದ ಜನರ ಆಘ್ರಹವಾಗಿದೆ.