ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಕಲಾ ಸೇವೆಯು ದೇವತಾ ಆರಾಧನೆಯ ಒಂದು ಭಾಗ, ನಿರಂತರವಾಗಿ ದೇವರ ಸನ್ನಿಧಿಯಲ್ಲಿ ಕಲಾರಾಧನೆ ನಡೆಯುವಂತಾಗಲಿ ಎಂದು ಶ್ರೀ ಹುಲ್ಲೋರಮನೆ ಶ್ರೀ ಗಜಾನನ ಮಾರುತಿ ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್ ಜೋಗಿನ ಜಡ್ಡಿ ನುಡಿದರು.

ಅಕ್ಟೋಬರ್ 17 ರಂದು ಸಂಜೆ ಯಲ್ಲಾಪುರ ಪಟ್ಟಣದ ಹುಲ್ಲೊಮನೆ ಗಜಾನನ ಮಾರುತಿ ಸಭಾಗ್ರದಲ್ಲಿ ಶ್ರೀ ಗಜಾನನ ಮಾರುತಿ ತಾಳಮದ್ದಲೆ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. (inauguration of Shri Gajanan Maruti Talamaddale Koota at Hullrmane Gajanan Maruti Sabhagra in Yallapur town on 17th October).

ನಂತರ ಹೊಸತೋಟ ಮಂಜುನಾಥ್ ಭಾಗ್ವತ್ ವಿರಚಿತ “ರಾಮ ನಿರಿರ್ಯಾಣ” ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾದ ನಾರಾಯಣ ಭಾಗ್ವತ್ ದೇವರಗದ್ದೆ, ನಾಗೇಂದ್ರ ಭಾಗ್ವತ್ ಶೇಡಿಜಡ್ಡಿ, ಗೋಪಾಲಕೃಷ್ಣ ಭಟ್ ಮೊಟ್ಟೆಪಾಲ್, ಮದ್ದಲೆ ವಾದಕರಾಗಿ ಗಣಪತಿ ಹೆಗಡೆ ಕಣ್ಣಿಜಡ್ಡಿ ಭಾಗವಹಿಸಿದ್ದರು.
ವಿ.ಟಿ,ಭಟ್ ಸೂಳಗಾರ(ರಾಮನಾಗಿ), ಶ್ರೀಧರ ಅಣಲಗಾರ (ಲಕ್ಷಣನಾಗಿ), ಸುಬ್ರಾಯ ಭಟ್ ಇಡಗುಂದಿ (ಕಾಲಪುರುಷನಾಗಿ), ಜಿ.ಎಸ್.ಭಟ್ ತಟ್ಟೀಗದ್ದೆ (ದೂರ್ವಾಸರಾಗಿ) ವಿವಿಧ ಪಾತ್ರಗಳನ್ನು ನಿರ್ವಹಿಸಿದರು.