ಸುದ್ಧಿಕನ್ನಡ ವಾರ್ತೆ
ಮುಧೋಳ : ಮಂಡ್ಯ ಜಿಲ್ಲೆಯಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಕನ್ನಡ ರಥಯಾತ್ರೆಗೆ ನಗರದಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಜಮಖಂಡಿ ತಾಲೂಕಿನಿಂದ ಮುಧೋಳ ತಾಲೂಕಿಗೆ ಆಗಮಿಸಿದ ಕನ್ನಡ ರಥವನ್ನು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಹಸೀಲ್ದಾರ್ ಮಹಾದೇವ ಸಣಮುರಿ ಸಂಭ್ರಮದಿಂದ ಸ್ವಾಗತಿಸಿ ಬರಮಾಡಿಕೊಂಡರು.
ಭುವನೇಶ್ವರಿ ಭಾವಚಿತ್ರ ಹೊತ್ತು ವಿಶೇಷವಾಗಿ ಅಲಂಕೃತಗೊಂಡಿದ್ದ ರಥವನ್ನು ರಾಯಣ್ಣ ವೃತ್ತದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಮಕ್ಕಳು ನಾಡಿನ ಹೋರಾಟಗಾರರ ವೇಷಭೂಷಣ ಧರಿಸಿ ಗಮನ ಸೆಳೆದರು. ಕರಡಿ ಮಜಲಿನೊಂದಿಗೆ ಹೊರಟ ಮೆರವಣಿಗೆ ಬಸ್ ನಿಲ್ದಾದವರೆಗೆ ಸಾಗಿ ಅಲ್ಲಿಂದ ಮಂಟೂರ ಮಾರ್ಗದ ಮೂಲಕ ಬೀಳಗಿ ತಾಲೂಕಿಗೆ ಜ್ಯೊತಿ ರಥಯಾತ್ರೆಯನ್ನು ಬಿಳ್ಕೊಟ್ಟರು.
ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ವಚನಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಬಾಡಗಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಮೇಶ ನಿಡೋಣಿ, ತಾಲೂಕುಮಟ್ಟದ ಅಧಿಕಾರಿಗಳಾದ ಮಹೇಶ ದಂಡನ್ನವರ, ವಿಠ್ಠಲ ಎಂ, ಸತೀಶ ಕುಂದರಗಿ ಸೇರಿದಂತೆ ಇತರರು ಇದ್ದರು.