ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಟ್ರಾಲಿ ಲಾರಿಯೊಂದು ಇನ್ನೊಂದುಲಾರಿಗೆ ಡಿಕ್ಕಿಪಡಿಸಿ ಟ್ರಾಲಿ ಲಾರಿಪಲ್ಟಿಬಿದ್ದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲಿ ಧಾರುಣ ಸಾವು ಕಂಡ ಘಟನೆ ರಾ.ಹೆದ್ದಾರಿ ೬೩ ಶೀರಲೆ ಕ್ರಾಸ್ ಬಳಿ ತಿರುವಿನಲ್ಲಿ ಗುರುವಾರ ಸಂಭವಿಸಿದೆ.
ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಅತೀವೇಗವಾಗಿ ಚಲಾಯಿಸಿಕೊಂಡು ಹೋದ ಟ್ರಾಲಿ ಲಾರಿ ಚಾಲಕ ಎದುರಿನಿಂದ ಬಂದ ಬಸ್ಸಿಗೆ ಡಿಕ್ಕಿಪಡಿಸಿ ಸ್ವಲ್ಪ ಮುಂದೆ ಹೋಗಿ ಪಲ್ಟಿಬಿದ್ದಿದೆ.ಟ್ರಾಲಿ ಲಾರಿ ಕ್ಲೀನರ್ ರಾಜಕುಮಾರಸಿಂಗ್ ಅರ್ಜುನ್ ಸಿಂಗ್ ಚಂದ್ರಮಂಡಿ ಜಾರ್ಖಂಡ ಈತ ಸ್ಥಳದಲ್ಲಿ ಸಾವು ಕಂಡಿದ್ದಾನೆ.
ಬಸ್ ಚಾಲಕ ಸೈಯ್ಯದ ಬುಡನ್ ಸೈಯ್ಯದ ಜಮಾಲ ಅಂಕೋಲಾ ಈತ ಲಾರಿ ಚಾಲಕ ಶಂಭು ಯಾದವ ಜಾರ್ಖಂಡ ಈತನ ಮೇಲೆ ದೂರು ನೀಡಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
—+—