ಸುದ್ದಿ ಕನ್ನಡ ವಾರ್ತೆ
ಶಿರಸಿ: ಸಮರ್ಪಕ ಗಣತಿ ಮಾಡದೇ ಮನಸ್ಸಿಗೆ ಬಂದಂತೇ ತಪ್ಪು ತಪ್ಪಾಗಿ ರಾಜ್ಯ ಕಾಂಗ್ರೆಸ್ ಸರಕಾರ ಜಾತಿ ಗಣತಿ ಮಾಡಿಸಿದೆ.
ಜಾತಿ ಗಣತಿ ಮೂಲಕ ಸಿಎಂ ಅಧಿಕಾರದ ಖುರ್ಚಿ ಭದ್ರ ಪಡಿಸಲು ಹೊರಟಿದ್ದಾರೆ. ನೀರು ಕದಡಿ ಮೀನು ಹಿಡಿಯುವ ಕೆಲಸ ಸಿಎಂ ಮಾಡುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ, ಸಿಎಂ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದ್ದಾರೆ. ದುರದೃಷ್ಟಕರವಾದ ಕಾಂಗ್ರೆಸ್ ಸರಕಾರದಲ್ಲಿನ ಮತ್ತೊಂದು ನಿರ್ಧಾರ. ತಪ್ಪು ಅಂಕೆ ಸಂಖ್ಯೆ ಕೊಡುತ್ತ ಜನರಿಗೆ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಆಗುವದಿದ್ದರೆ ವೈಜ್ಞಾನಿಕ ಗಣತಿ ಆಗಲಿ. ಓಲೈಕೆ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ ಎಂದರು.
ಸಿದ್ದರಾಮಯ್ಯ ಅವರು ನಿವೃತ್ತಿಯ ವಯಸ್ಸಿನಲ್ಲಿ ಇದ್ದಾರೆ. ಅವರು ಇನ್ನಾದರೂ ಎಚ್ಚೆತ್ತುಕೊಂಡು ಸಮಾಜ ಘಾತಕ ಕೆಲಸ ಮಾಡಬಾರದು. ಜೊತೆಗೆ ಗ್ಯಾರೆಂಟಿ ಮಾಡಿ ಬೆಲೆ ಏರಿಕೆ ಮಾಡುತ್ತಿದೆ. ಆಡು ಮುಟ್ಟದ ಸೋಪ್ಪಿಲ್ಲ ಎಂಬಂತೆ ಬೆಲೆ ಏರಿಕೆ ಮಾಡದ ವಸ್ತುಗಳೇ ಇಲ್ಲ ಎಂದರು.
ಕೇಂದ್ರ ಸರಕಾರ ತೀರ್ಮಾನದ ಕಾರಣದಿಂದ ಅಡಿಕೆ, ಕಾಳು ಮೆಣಸಿನ ದರ ಕೂಡ ಏರುತ್ತಿದೆ. ಹುರಿದ ಅಡಿಕೆ ಆಮದು ದರ ಕೂಡ ಹೆಚ್ಚಿಸಲಾಗಿದೆ. ವಿದೇಶಿ ಅಡಿಕೆ ಆಮದಾಗುವದೂ ನಿಯಂತ್ರಣದಲ್ಲಿದೆ ಎಂದರು.
ಈ ವೇಳೆ ಆರ್.ಡಿ.ಜಾನ್ಮನೆ, ಸದಾನಂದ ಭಟ್ಟ, ಶರ್ಮಿಳಾ ಮಾದನಗೇರಿ, ನಾಗರಾಜ ನಾಯ್ಕ, ಉಷಾ ಹೆಗಡೆ, ರಮಾಕಾಂತ ಭಟ್ಟ, ನವೀನ ಶೆಟ್ಟಿ, ನಾಗರಾಜ ಶೆಟ್ಟಿ, ರವಿಚಂದ್ರ ಶೆಟ್ಟಿ ಇದ್ದರು.