ಸುದ್ದಿಕನ್ನಡ ವಾರ್ತೆ
ಗುಜರಾತ್ ನ ಅಹಮದಾಬಾದ್ ನಲ್ಲಿ ಗುರುವಾರ ಮಧ್ಯಾನ್ಹ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಯಾರೂ ಬದುಕಿ ಉಳಿದಿಲ್ಲ (No one survived the plane crash.). ವಿಮಾನವು ಹಾಸ್ಟೇಲ್ ಒಳಗೆ ನುಗ್ಗಿದ್ದರಿಂದ ಕೆಲ ಸ್ಥಳೀಯರು ಸಾವನ್ನಪ್ಪಿರಬಹುದು ಎಂದು ನಗರ ಪೆÇಲೀಸ್ ಆಯುಕ್ತರಾದ ಜಿಎಸ್ ಮಲಿಕ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಭೀಕರ ವಿಮಾನ ದುರಂತದಲ್ಲಿ ಯಾರೋಬ್ಬರೂ ಬದುಕಿ ಉಳಿದಿರವ ಸಾಧ್ಯತೆ ಇಲ್ಲ ಅಂತ ಕಮಿಷನರ್ ಹೇಳಿದ್ದಾರೆ. ಈ ವಿಮಾನವು ಜನವಸತಿ ಹಾಗೂ ಕಚೇರಿಗಳಿರುವ ವಸತಿ ಪ್ರದೇಶದಲ್ಲಿ ಪತನವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ್ದಾರೆ.
242 ಜನರನ್ನು ಹೊತ್ತ ಏರ್ ಇಂಡಿಯಾ ವಿಮಾನ (An Air India flight carrying 242 people) ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಏಪೆರ್Çೀರ್ಟ್ ಮೂಲಕ ಲಂಡನ್ ಕಡೆಗೆ ಪ್ರಯಾಣ ಬೆಳೆಸಿತ್ತು. ಹೀಗೆ 232 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನ ತಮ್ಮ ಪ್ರಯಾಣದ ಸ್ಥಳ ತಲುಪುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡ ಏರ್ ಇಂಡಿಯಾ ವಿಮಾನವು ಗಾಳಿಯಲ್ಲಿ ತೇಲುತ್ತಾ, ಅಲ್ಲಾಡಿ ಹೋಗಿದೆ. ನೋಡ ನೋಡುತ್ತಲೇ ಈ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಪೈಲೆಟ್ ಮುಂದಾಗಿದ್ದಾರೆ.
58,000 ಲೀಟರ್ ಪೆಟ್ರೋಲ್ ಹೊಂದಿದ್ದ ವಿಮಾನ…
ಭಾರತದಲ್ಲಿ ಸಂಭವಿಸಿದ ಅತಿ ಘೋರ ವಿಮಾನ ದುರಂತಗಳ ಸಾಲಿಗೆ ಇಂದು ಮತ್ತೊಂದು ದುರಂತ ಸೇರ್ಪಡೆ ಆಗಿದೆ. ಲಂಡನ್ ಕಡೆಗೆ ಪ್ರಯಾಣ ಬೆಳೆಸುವ ವಿಮಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಅಗತ್ಯತೆ ಇರುತ್ತದೆ, ಸುಮಾರು 8 ಗಂಟೆಗಳ ಪ್ರಯಾಣ ಇದಾಗಿರುತ್ತದೆ. ಹೀಗಾಗಿ ಸುಮಾರು 58,000 ಲೀಟರ್ ಪೆಟ್ರೋಲ್ ತುಂಬಿಸಲಾಗಿತ್ತು(58,000 liters of petrol was filled). ಆದರೆ ಇಷ್ಟೊಂದು ಭಾರಿ ಪ್ರಮಾಣದಲ್ಲಿ ವೈಟ್ ಪೆಟ್ರೋಲ್ ತುಂಬಿಸಿದ್ದ ಏರ್ ಇಂಡಿಯಾದ ಲಂಡನ್ ವಿಮಾನ ಕೆಳಗೆ ಬಿದ್ದು ಬ್ಲಾಸ್ಟ್ ಆಗಿದೆ.