ಸುದ್ಧಿಕನ್ನಡ ವಾರ್ತೆ
ಕನ್ನಡ ಸಾಹಿತ್ಯ ಪರಿಷತ್ತು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಹಾಗೂ ಚಿಕ್ಕಮಗಳೂರು ಇವರ ಆಶ್ರಯದಲ್ಲಿ ಪ್ರಪ್ರಥಮ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಅಗಷ್ಟ 22 ರಂದು ಶುಕ್ರವಾರ ರಾಯರ ಸನ್ನಿಧಿ ಮಂತ್ರಾಲಯ (ಆಂಧ್ರಪ್ರದೇಶ)ದಲ್ಲಿ ನಡೆಯಲಿದೆ.
ಅಗಷ್ಟ 22 ರಂದು ಬೆಳಿಗ್ಗೆ 7 ಗಂಟೆಗೆ ರಾಷ್ಟ್ರಧ್ವಜ ಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ನೆರವೇರಿಸಲಿದ್ದಾರೆ. ಪರಿಷತ್ತಿನ ಧ್ವಜವನ್ನು ಆಂಧ್ರಪ್ರದೇಶದ ಕಸಾಪ ಅಧ್ಯಕ್ಷ ಅಂಜನ್ ಕುಮಾರ್, ತೆಲಂಗಾಣದ ಕಸಾಪ ಅಧ್ಯಕ್ಷ ಗುಡಿಗಂಟಿ ವಿಠ್ಠಲ್ ರವರು ನೆರವೇರಿಸಲಿದ್ದಾರೆ. ನಾಡಧ್ವಜವನ್ನು ಚಿಕಮಗಳೂರಿನ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಮಹಾರಾಷ್ಟ್ರದ ಕಸಾಪ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಗೋವಾ ರಾಜ್ಯದ ಕಸಾಪ ಅಧ್ಯಕ್ಷ ಸಿದ್ಧಪ್ಪ ಸಂಗಪ್ಪ ಮೇಟಿ ನೆರವೇರಿಸಲಿದ್ದಾರೆ.
ಅಂದು ಬೆಳಿಗ್ಗೆ 7.30 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು ಕಸಾಪ ಬೆಂಗಳೂರಿನ ಕೋಶಾಧ್ಯಕ್ಷ ಡಿ.ಆರ್.ವಿಜಯಕುಮಾರ್ ಉಧ್ಘಾಟನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರ, ಗೋವಾ ರಾಜ್ಯದ ಅಧ್ಯಕ್ಷರುಗಳು, ಚಿಕಮಗಳೂರು ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಉಪಸ್ಥಿತರಿರುವರು.
ಅಗಷ್ಟ 22 ರಂದು ಬೆಳಿಗ್ಗೆ 8.30 ಕ್ಕೆ ಉಧ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಸುಭುಧೇಂದ್ರ ತೀರ್ಥರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಸಾಪ ಬೆಂಗಳೂರು ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ರವರು ಉಧ್ಘಾಟನೆ ನೆರವೇರಿಸಲಿದ್ದಾರೆ. ಕಸಾಪ ಬೆಂಗಳೂರು ಗೌ.ಕಾರ್ಯದರ್ಶಿ ಡಾ.ಪಟೇಲ್ ಪಾಂಡು ಭುವನೇಶ್ವರಿಯ ಭಾವಚಿತ್ರವನ್ನು ಅನಾವರಣಗೊಳಿಸಲಿದ್ದಾರೆ. ಕಸಾಪ ತೆಲಂಗಾಣ ಅಧ್ಯಕ್ಷ ಗುಡಗಂಟಿ ವಿಠ್ಠಲ ರವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕಸಾಪ ಚಿಕಮಗಳೂರು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಆಶಯ ನುಡಿಗಳನ್ನಾಡಲಿದ್ದಾರೆ. ಸಾಹಿತಿಗಳಾದ ಡಾ. ಪ್ರದೀಪ್ ಕುಮಾರ್ ಹೆಬ್ರಿ ರವರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ.
ಅಗಷ್ಟ 22 ರಂದು ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ಗೋಷ್ಠಿ, ನಂತರ ಗಮಕ ಗೋಷ್ಠಿ, ಬಹುಭಾಷಾ ಕವಿಗೋಷ್ಠಿ, ನಡೆಯಲಿದೆ. ನಂತರ ಸಾಹಿತ್ಯ ಸಿರಿ ಪ್ರಶಸ್ತಿ, ಕನ್ನಡ ಸಿರಿ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸಲಾಗುತ್ತದೆ. 3.20 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಅಂತರರಾಜ್ಯ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಲೊಳ್ಳಿ.