ಸುದ್ದಿ ಕನ್ನಡ ವಾರ್ತೆ
ಉತ್ತರಾಖಂಡ್ ಪ್ರಸಿದ್ಧ ಬದರಿನಾಥ್ ಧಾಮದ ಬಳಿ ದೊಡ್ಡದುರ್ಘಟನೆ ಒಂದು ಸಂಭವಿಸಿದೆ. ಜೋಶಿ ಮಠ ಪರಿಸರದ ಚಾಯಿ ಹಾಗೂ ಟಾಂಗ್ ಊರಿನ ಹಾರಾಡುತ್ತಿದ್ದ ಒಂದು ಹೆಲಿಕ್ಯಾಪ್ಟರ್ ಇದ್ದಕ್ಕಿದ್ದಂತೆ ಅಪಘಾತಕ್ಕೀಡಾಗಿ ಬೆಂಗಳೂರು ಮೂಲದ ಐವರು ಸೇರಿ ಒಟ್ಟು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಕ್ಯಾಲಿಕ್ಯಾಪ್ಟರ್ ಟ್ರಾನ್ಸ್ ಭಾರತ್ ಕಂಪನಿಯದ್ದಾಗಿತ್ತು. ಬದ್ರಿನಾಥ್ ಧಾಮದಿಂದ ಆರು ಪ್ರವಾಸಿಗರನ್ನು ಕರೆದುಕೊಂಡು ಹೆಲಿಕಾಪ್ಟರ್ ಮೂಲಕ ಕೃಷಿ ಕೇಶ ಮಾರ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿ ಅನುಸಾರ ಹವಾಮಾನ ವೈಪರಿತದಿಂದಾಗಿ ಹಾಗೂ ಮೋಡಕ ವಿಧ ವಾತಾವರಣದಿಂದಾಗಿ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಅಪಘಾತಕೀಡಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗುತ್ತಿದೆ. ಈ ಹೆಲಿಕ್ಯಾಪ್ಟರ್ ನಲ್ಲಿದ್ದ ಚಾಲಕ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಚಾಲಕ ಹಿಮಾಂಶು, ಬೆಂಗಳೂರು ಮೂಲದ ಪ್ರಯಾಣಿಕರಾದ ಚಂದ್ರಕಾಂತ್, ರಾಜಶ್ರೀ, ದಿನೇಶ್, ಆಕಾಶ್, ಅಥರ್ವ ಎಂಬ ಪ್ರವಾಸಿಗರು ಸಾವನ್ನಪ್ಪಿದ್ದಾರೆ.
