ಸುದ್ಧಿಕನ್ನಡ ವಾರ್ತೆ
ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕ್ರೊಯೇಷಿಯಾ  (Croatia) ದೇಶದ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರಿಗೆ ಬೆಳ್ಳಿಯ ಮೇಣದ ಬತ್ತಿ ಸ್ತಂಭ ಮತ್ತು ಕ್ರೊಯೇಷಿಯಾ ದೇಶದ ಅಧ್ಯಕ್ಷ ಜೋರನ್ ಮಿಲನೋವಿಕ್ ಅವರಿಗೆ ಪಟ್ಟಚಿತ್ರ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.

 

ರಾಜಸ್ತಾನದ ಈ ಬೆಳ್ಳಿಯ ಮೇಣದಬತ್ತಿ ಸ್ತಂಭವು (Candle Stand) ಈ ಪ್ರದೇಶದ ಸಾಂಪ್ರದಾಯಿಕ ಲೋಹದ ಕೆತ್ತನೆಯ ಪ್ರತೀಕವಾಗಿದೆ. ನುರಿತ ಕುಶಲಕರ್ಮಿಗಳ ಕೈಯಿಂದ ತಯಾರಿಸಲ್ಪಟ್ಟ ಈ ಸ್ಥಂಭ , ಹಳೆಯ ಕೆತ್ತನೆ ತಂತ್ರಗಳನ್ನು ಬಳಸಿ ರಚಿಸಲಾದ ಹೂವಿನ ಮತ್ತು ಜ್ಯಾಮಿತೀಯ ವಿನ್ಯಾಸಗಳನ್ನು ಒಳಗೊಂಡಿದೆ. ಸೊಗಸಾದ ಆಕಾರ ಮತ್ತು ಸೂಕ್ಷ್ಮ ಮಾದರಿಗಳು ರಾಜಮನೆತನದ ಮತ್ತು ಕಾಲಾತೀತ ನೋಟವನ್ನು ನೀಡುತ್ತವೆ.

 

ಕ್ರೊಯೇಷಿಯಾ ದೇಶದ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಲಾದ ಪಟ್ಟಚಿತ್ರ ವರ್ಣಚಿತ್ರವು ಒಡಿಶಾದ ಸುಂದರವಾದ ಸಾಂಪ್ರದಾಯಿಕ ಕಲಾ ಪ್ರಕಾರವಾಗಿದ್ದು, ಬಟ್ಟೆಯ ಮೇಲಿನ ವರ್ಣಮಯ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದೆ.

 

ವರ್ಣಚಿತ್ರದ ಹೆಸರು “ಪಟ್ಟ” (ಬಟ್ಟೆ) ಮತ್ತು “ಚಿತ್ರ” ದಿಂದ ಬಂದಿದೆ. ಈ ಕಲಾಕೃತಿಗಳು ಸಾಮಾನ್ಯವಾಗಿ ಭಾರತೀಯ ಪುರಾಣಗಳ ಕಥೆಗಳನ್ನು, ವಿಶೇಷವಾಗಿ ಶ್ರೀಕೃಷ್ಣ ಮತ್ತು ಜಗನ್ನಾಥನ ಬಗ್ಗೆ ತೋರಿಸುತ್ತವೆ. ಕಲಾವಿದರು ದಪ್ಪ ರೇಖೆಗಳು ಮತ್ತು ವಿವರವಾದ ದೃಶ್ಯಗಳನ್ನು ರಚಿಸಲು ನೈಸರ್ಗಿಕ ಬಣ್ಣ ಮತ್ತು ಕೈಯಿಂದ ಮಾಡಿದ ಕುಂಚಗಳನ್ನು ಬಳಸಿ ವಿಶೇಷವಾಗಿ ಚಿತ್ರಿಸುತ್ತಾರೆ.