ಸುದ್ದಿಕನ್ನಡ ವಾರ್ತೆ
ನವದೆಹಲಿ: ಹಾಂಗ್ ಕಾಂಗ್ ನಿಂದ ಸೋಮವಾರ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಪೈಲಟ್, ತಾಂತ್ರಿಕ ದೋಷದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮಾರ್ಗ ಮಧ್ಯದಿಂದಲೇ ವಾಪಸ್ ಆಗಿ ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದ ಘಟನೆ ನಡೆದಿದೆ.
ವಿಮಾನವು ಹಾಂಗ್ ಕಾಂಗ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ/
ವಿಮಾನವು ಹಾಂಗ್ ಕಾಂಗ್ ನಿಂದ ಬೆಳಗ್ಗೆ 9.50ಕ್ಕೆ(ಭಾರತೀಯ ಕಾಲಮಾನ) ಟೇಕಾಫ್ ಆಯಿತು ಮತ್ತು ದೆಹಲಿಯಲ್ಲಿ ಇಂದು ಮಧ್ಯಾಹ್ನ 12: 20ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಮಾರ್ಗಮಧ್ಯದಲ್ಲಿ ವಿಮಾನ ದೋಷದ ಬಗ್ಗೆ ಪೈಲಟ್ ಗೆ ಅನುಮಾನ ವ್ಯಕ್ತವಾಗುತ್ತಿದ್ದಂತೆಯೇ ವಾಪಸ್ಸು ಹಾಂಗ್ ಕಾಂಗ್ ಗೆ ವಿಮಾನವನ್ನು ತೆಗೆದುಕೊಂಡು ಹೋಗಿ ಲ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ಜೂನ್ 12 ರಂದು ಮಧ್ಯಾಹ್ನ 1:39 ಕ್ಕೆ ಅಹಮದಾಬಾದ್ ನಿಂದ ಲಂಡನ್‍ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮೇಘನಿನಗರದ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 242 ಜನರಲ್ಲಿ 241 ಜನ ಮತ್ತು ಕೆಳಗಡೆ ಇದ್ದ 29 ಜನ ಸಾವನ್ನಪ್ಪಿದ್ದರು.