ಸುದ್ದಿಕನ್ನಡ ವಾರ್ತೆ
ನವದೆಹಲಿ: ನಿಜಾಮುದ್ದೀನ್‍ನಿಂದ ಗಾಜಿಯಾಬಾದ್‍ಗೆ ಹೊರಟಿದ್ದ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ 64419) ದೆಹಲಿಯ ಶಿವಾಜಿ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿದೆ (A passenger train has met with an accident near Shivaji Bridge in Delhi). ಈ ಘಟನೆಯಲ್ಲಿ ನಾಲ್ಕನೇ ಬೋಗಿ ಬ್ರಿಡ್ಜ್‍ನಿಂದ ಕೆಳಗೆ ಬಿದ್ದಿದ್ದು, ಅದೃಷ್ಠವಷಾತ್ ಯಾವುದೇ ಪ್ರಾಣಹಾನಿ ವರಿದಿಯಾಗಿಲ್ಲವೆಂದು ಉತ್ತರ ರೈಲ್ವೆ ವಲಯದ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಘಟನೆಯ ನಂತರ, ಈ ಪ್ರಮುಖ ಮಾರ್ಗದ ಹಲವು ರೈಲುಗಳು ವಿಳಂಬವಾಗಿದ್ದು, ಕೆಲವು ರೈಲುಗಳನ್ನು ಬೇರೆ ಮಾರ್ಗಗಳಿಗೆ ಬದಲಾಯಿಸಲಾಗಿದೆ. ತಕ್ಷಣವೇ ರಕ್ಷಣಾ ತಂಡಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬೋಗಿಯನ್ನು ಮತ್ತೆ ಹಳಿಗೆ ತರಲು ಭಾರಿ ಕ್ರೇನ್‍ಗಳನ್ನು ಬಳಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಹಮದಾಬಾದ್‍ನಲ್ಲಿ ನಡೆದ ವಿಮಾನ ಅಪಘಾತದ ಬೆನ್ನಲ್ಲೇ ರೈಲು ದುರ್ಘಟನೆ ಸಂಭವಿರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯಿಂದಾಗಿ ದೆಹಲಿಯಿಂದ ಹೊರಟಿದ್ದ ಹಲವು ರೈಲುಗಳು ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು ವರದಿಯಾಗಿದೆ.