ಸುದ್ಧಿಕನ್ನಡ ವಾರ್ತೆ
ಪ್ರಯಾಗರಾಜ್: ಹಿಂದೂ ಸಂಪ್ರದಾಯದ ಪ್ರಕಾರ ಮಹಾಕುಂಭಮೇಳದಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತದೆ ಮತ್ತು ಆಧ್ಯಾತ್ಮಿಕ ವಿಮೋಚನೆ (ಮೋಕ್ಷ) ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಅಪಾರ ಸಂಖ್ಯೆಯಲ್ಲಿ ಸಾಧುಸಂತರು, ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ.

ಮಹಾಕುಂಭ ಮೇಳದಲ್ಲಿ ಪ್ರತಿದಿನವೂ ಪುಣ್ಯ ಸ್ನಾನವೇ ಆಗಿದ್ದರೂ ಕೂಡ ಕೆಲವು ದಿನಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ. ಜನವರಿ 29 ರಂದು ಮೌನಿ ಅಮಾವಾಸ್ಯೆಯಾಗಿದ್ದು ಅಂದು ಎರಡನೇಯ ರಾಜಸಿ ಸ್ನಾನವಿದೆ, ಫೆಬ್ರುವರಿ 3 ರಂದು ವಸಂತ ಪಂಚಮಿಯಾಗಿದ್ದು ಅಂದು ಮೂರನೇಯ ರಾಜಸಿ ಸ್ನಾನವಿದೆ, ಫೆಬ್ರುವರಿ 12 ರಂದು ಪೌರ್ಣಮಿಯ ಸ್ನಾನ ಪರ್ವವಿದೆ, ಫೆಬ್ರುವರಿ 26 ರಂದು ಮಹಾಶಿವರಾತ್ರಿಯಂದು ಅಂತಿಮ ಸ್ನಾನ ಪರ್ವವಿದೆ. ಈ ಎಲ್ಲ ದಿನಗಳು ಸಂಗಮ ಸ್ನಾನಕ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಮೌನಿ ಅಮಾವಾಸ್ಯೆ…
ಜನವರಿ 29 ರಂದು ಅಮಾವಾಸ್ಯೆ ಆರಂಭಗೊಳ್ಳುವ 4 ಗಂಟೆಗಳ ಮೊದಲು ಸೂರ್ಯ,ಚಂದ್ರ,ಗುರು, ಮತ್ತು ಶನಿ ಗೃಹಗಳು ಸರಳ ರೇಖೆಯಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರತಿ 144 ವರ್ಷಗಳಿಗೊಮ್ಮೆ ಈ ಗೃಹಗಳು ಸರಳ ರೇಖೆಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಿಂದೆ 1881 ರಲ್ಲಿ ಇದೇ ರೀತಿ ಗೃಹಗಳು ಸರಳ ರೇಖೆಯಲ್ಲಿ ಬಂದಿದ್ದವು. ಅಂದು ಮಹಾಕುಂಭ ಮೇಳವನ್ನು ಆಚರಣೆ ಮಾಡಲಾಗಿತ್ತು. ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ ಪ್ರಯಾಗರಾಜ್ ನಲ್ಲಿದೆ. ಪ್ರಸಕ್ತ 2025 ರ ಜನವರಿ 13 ರಂದು ಆರಂಭಗೊಂಡಿರುವ ಮಹಾಕುಂಭ ಮೇಳ ಫೆಬ್ರುವರಿ 26 ರಂದು ಮುಕ್ತಾಯಗೊಳ್ಳಲಿದೆ.

 

ಕುಂಭ ಮೇಳ ಪ್ರತಿ 12 ವರ್ಷಗಳಿಗೊಮ್ಮೆ ಭಾರತದ 4 ಪ್ರಮುಖ ನದಿ ತೀರಗಳಲ್ಲಿ ನಡೆಯುವ ಧೀಮಮಂತ ಉತ್ಸವ. ಗಂಗಾ ನದಿ ತೀರ-ಪ್ರಯಾಗರಾಜ್, ಯಮುನಾ ನದಿ ತೀರದ ಹರಿದ್ವಾರ, ಸರಸ್ವತಿ ನದಿ ತೀರ ನಾಸಿಕ್, ಗೋದಾವರಿ ನದಿ ತೀರ ಉಜ್ಜೈನಿ ಈ ನಾಲ್ಕು ನದಿ ತೀಗಳಲ್ಲಿ ಕುಂಭ ಮೇಳ ನಡೆಸಲಾಗುತ್ತದೆ. 3 ವರ್ಷಗಳಿಗೊಮ್ಮೆ ನಡೆಯುವುದು ಕುಂಭ ಮೇಳ, 6 ವರ್ಷಕ್ಕೊಮ್ಮೆ ನಡೆಯುವ ಕುಂಭವನ್ನು ಅರ್ಧಕುಂಭ ಎಂದು 12 ವರ್ಷಕ್ಕೊಮ್ಮೆ ನಡೆಯುವ ಮೇಳವನ್ನು ಪೂರ್ಣಕುಂಭ ಮೇಳ ಎಂದು ಕರೆಯಲಾಗುತ್ತದೆ. ಸದ್ಯ ನಡೆಯುತ್ತಿರುವುದು 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ.
ಸದ್ಯ 144 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕುಂಭ ಮೇಳವು ಸದ್ಯ ನಡೆಯುತ್ತಿದೆ. ಈ ಹಿಂದೆ ಈ ಮಹಾಕುಂಭ ಮೇಳವು 1881 ರಲ್ಲಿ ನಡೆದಿತ್ತು. ಮುಂದೆ ಈ ಮಹಾ ಕುಂಭ ಮೇಳ 2169 ರಲ್ಲಿ ನಡೆಯಲಿದೆ.

ಖಗೋಳ ಶಾಸ್ತ್ರದ ಪ್ರಕಾರ ಗುರು ಗೃಹವು ಸೂರ್ಯನನ್ನು ಸುತ್ತಿಕೊಂಡು ಬರಲು 12 ವರ್ಷ ಬೇಕು. ಈ 12 ವರ್ಷಕ್ಕೊಮ್ಮೆ ಸುತ್ತಿ ಬಂದಾಗ ಪೂರ್ಣ ಕುಂಭ ಮೇಳ ನಡೆಯುತ್ತದೆ. ಇದೇ ಗುರುಗೃಹ 12 ಸಲ ಸುತ್ತಿಕೊಂಡು ಬಂದಾಗ 144 ವರ್ಷಕ್ಕೊಮ್ಮೆ ಮಹಾ ಕುಂಭ ಮೇಳ ನಡೆಸಲಾಗುತ್ತದೆ.