ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಮಾಗಮವಾದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆಯವರು ತಮ್ಮ ಧರ್ಮಪತ್ನಿ ರಾಧಾ ಆರ್. ದೇಶಪಾಂಡೆ ಹಾಗೂ ಕುಟುಂಬ ಸದಸ್ಯರೊಂದಿಗೆ ಮಂಗಳವಾರ ಭಾಗವಹಿಸಿದರು.

 

ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅವರ ಹಿರಿಯ ಪುತ್ರ ಪ್ರಸಾದ ದೇಶಪಾಂಡೆ, ಸೊಸೆ ಮೇಘನಾ ಆರ್.ದೇಶಪಾಂಡೆ ಮತ್ತು ಮೊಮ್ಮಕ್ಕಳಾದ ದ್ರುವ ದೇಶಪಾಂಡೆ ಹಾಗೂ ವಿವಾನ ದೇಶಪಾಂಡೆ ಅವರ ಜೊತೆಯಲ್ಲಿದ್ದರು.