ಸುದ್ದಿ ಕನ್ನಡ ವಾರ್ತೆ

ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ 218ರ ಹುಬ್ಬಳ್ಳಿ ವಿಜಯಪುರದ ಕೋರ್ತಿ ಕೊಲ್ಹಾರ ಕೃಷ್ಣಾ ನದಿ ಸೇತುವೆ ಮೇಲಿಂದ ಹಾಯವಾ ಟಿಪ್ಪರ್ ಕೆಳಗೆ ಬಿದ್ದು ಓರ್ವ ಸಾವನ್ನಪ್ಪಿ ಇನ್ನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಸಾಯಂಕಾಲ ಸಂಭವಿಸಿದೆ.

ಬೀಳಗಿ ಕಡೆಯಿಂದ ಕೊಲ್ಹಾರಕ್ಕೆ ಬರುತ್ತಿರುವ ವೇಳೆ
ಸೇತುವೆಯ ಮೇಲಿನಿಂದ ಟಿಪ್ಪರ್ ಕೆಳಕ್ಕೆ ಬಿದ್ದು ಸ್ಥಳದಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಹಾಗೂ ಗಂಭೀರ ಗಾಯಗೊಂಡವನ ವಿವರ ತಿಳಿದು ಬಂದಿಲ್ಲ. ಟಿಪ್ಪರ್ ನಜ್ಜು ಗುಜ್ಜಾಗಿದೆ.