ಸುದ್ದಿ ಕನ್ನಡ ವಾರ್ತೆ

ಬೆಳಗಾವಿ: ಸಮೃದ್ಧ ಭಾರತಕ್ಕೆ ನಮ್ಮದೊಂದು ಕೊಡುಗೆ ಎಂಬ ಶೀರ್ಷಿಕೆಯಲ್ಲಿ ನಿರುದ್ಯೋಗಿ ಅಂಗವಿಕಲ ಕಪಿಲಸಿಂಗನಿಗೆ ಸ್ವಯಂ ಉದ್ಯೋಗ ಮಾಡಲು ಬೆಳಗಾವಿಯ ಸಮೃದ್ಧ ಅಂಗವಿಕಲರ ಸಂಸ್ಥೆಯು ನೆರವಾಯಿತು.

ಬೆಳಗಾವಿಯಲ್ಲಿ ಸಾಕಷ್ಟು ಅಂಗವಿಕಲರಿಗೆ ಉಚಿತ ಊಟ ವಸತಿ ಹಾಗೂ ಶಿಕ್ಷಣದ ಜೊತೆಗೆ ಸಾಕಷ್ಟು ಯೋಜನೆಗಳ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸುತ್ತ ಬರುತ್ತಿದೆ
ಅದೇ ರೀತಿ ಸಮೃದ್ಧ ಭಾರತಕ್ಕೆ ನಮ್ಮದೊಂದು ಕೊಡುಗೆ ಎಂಬ ಶೀರ್ಷಿಕೆಯಲ್ಲಿ ಸಾಕಷ್ಟು ಅಂಗವಿಕಲರಿಗೆ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸಿದಂತೆ ರವಿವಾರದಂದು ದಿನಾಂಕ 09/02/2025 ರಂದು ಅಂಗವಿಕಲತೆ ಹೊಂದಿರುವ ಕಪಿಲ್ ಸಿಂಗ್ ಅವರಿಗೆ ದಾನಿಗಳು ನೀಡಿದ ಹಣ ಸಂಗ್ರಹಿಸಿ ಸ್ವಯಂ ಉದ್ಯೋಗದ ಅಡಿಯಲ್ಲಿ ಬಂಡವಾಳ ಹೂಡಿಕೆ ಮಾಡಿ ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ಸಂಸ್ಥೆಯಲ್ಲಿ ತಯಾರಿಸುವ ಫಿನೈಲ್ ಅಗರಬತ್ತಿ ಧೂಪ್ ಹಾಗೂ ಇನ್ನೂ ಮುಂತಾದ ಸಾಮಗ್ರಿಗಳನ್ನು ಒದಗಿಸಿ ಸ್ವಯಂ ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪಾಟೀಲ್ ಮಾತನಾಡಿ ಅಂಗವಿಕಲರು ಕೇವಲ ಸಮಾಜದಿಂದ ಪಡೆಯುವುದಲ್ಲದೆ ಸಮಾಜಕ್ಕೆ ಅಂಗವಿಕಲರು ಸಹ ಕೊಡುಗೆ ನೀಡುವ ಉದ್ದೇಶದಿಂದ ದಾನಿಗಳು ನೀಡಿರುವ ಸಹಾಯ ಹಸ್ತವನ್ನು ಬಂಡವಾಳ ಮಾಡಿಕೊಂಡು ಅಂಗವಿಕಲರು ಸ್ವಯಂ ಉದ್ಯೋಗ ಮಾಡಿ ತಮ್ಮ ಜೀವನವನ್ನು ಸಾಗಿಸಬೇಕೆಂಬ ಉದ್ದೇಶದಿಂದ ಈ ಯೋಜನೆಯ ಮೂಲಕ ಬೆಳಗಾವಿಯಲ್ಲಿರುವ ಹೆಚ್ಚಿನ ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವ ಉದ್ದೇಶವನ್ನು ಹೊಂದಿದ್ದು ಇನ್ನು ಹೆಚ್ಚಿನ ದಾನಿಗಳ ನೆರವಿನ ಮೂಲಕ ಅಂಗವಿಕಲರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ನೆರವಾಗಬೇಕೆಂದು ತಿಳಿಸುವುದರ ಮೂಲಕ ಕಪಿಲ್ ಸಿಂಗ್ ಅವರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರಾದ ಪದ್ಮಪ್ರಸಾದ್ ಹುಲಿ ಅವರು ಅಂಗವಿಕಲರಿಗೆ ಸಮಾಜದಲ್ಲಿ ಎಷ್ಟೋ ಜನ ಉದ್ಯೋಗ ಕೊಡಲು ನಿರಾಕರಿಸುತ್ತಾರೆ ಆದರೆ ನಮ್ಮ ಸಮೃದ್ಧ ಅಂಗವಿಕಲರ ಸಂಸ್ಥೆಯ ಸ್ವಯಂ ಉದ್ಯೋಗದ ಯೋಜನೆಯ ಅಡಿಯಲ್ಲಿ ಅಂಗವಿಕಲರು ತಮ್ಮ ಬದುಕನ್ನು ತಾವು ನಡೆಸುವಂತೆ ಪ್ರೋತ್ಸಾಹಿಸುವುದನ್ನು ಕಂಡು ತುಂಬಾ ಸಂತೋಷವಾಗುತ್ತದೆ ,ಇದೇ ರೀತಿ ಸಂಸ್ಥೆಯು ನೀವು ಹೆಚ್ಚಿನ ಅಂಗವಿಕಲರಿಗೆ ಜೀವನವನ್ನು ಸಾಗಿಸಲು ನೆರವಾಗಲಿ ದಾನಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂಗವಿಕಲರಿಗೆ ಬದುಕನ್ನು ಕಟ್ಟಿಕೊಳ್ಳುವಲ್ಲಿ ನೆರವಾಗಬೇಕೆಂದು ಈ ಮೂಲಕ ತಿಳಿಸುತ್ತಾ ಸಮಾಜದ ಪ್ರತಿಯೊಬ್ಬರು ನಿಮ್ಮಿಂದ ಸಾಧ್ಯವಾದಷ್ಟು ಅಂಗವಿಕಲರು ಕಂಡರೆ ಅವರ ದುಡಿಮೆಗೆ ಖರೀದಿ ಮಾಡುವುದರ ಮೂಲಕ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರಶಾಂತ್ ಪೋತದಾರ ಅವರು ಕಪಿಲ್ ಸಿಂಗ್ ಅವರಿಗೆ ಶುಭ ಹಾರೈಸುವುದರ ಮೂಲಕ ಕೇವಲ ದಾನಿಗಳಿಂದ ತಗೊಳ್ಳೋದಲ್ಲದೆ ನಾವು ಕೂಡ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಹೊಸ ಹೊಸ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದ್ದೇವೆ ಅದೇ ರೀತಿ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಮಾಜದಲ್ಲಿ ಇರುವ ನಿರುದ್ಯೋಗಿ ಅಂಗವಿಕಲರಿಗೆ ಸಂಸ್ಥೆಯಿಂದ ನೆರವಾಗುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಪಿಲ್ ಸಿಂಗ್ ಸಹಾಯ ಪಡೆದುಕೊಂಡು ಸಂಸ್ಥೆಯ ಋಣ ಎಂದಿಗೂ ತೀರಿಸಲಾಗದು ನನ್ನ ಜೀವನಕ್ಕೆ ಒಂದು ಹೊಸ ಉದ್ಯೋಗ ಸೃಷ್ಟಿ ಮಾಡಿಕೊಂಡು ಜೀವನ ಸಾಗಿಸಲು ನೆರವಾಗಿದ್ದಕ್ಕೆ ಸಂಸ್ಥೆಯ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿ ತಮ್ಮ ನಡೆದು ಬಂದ ಜೀವನದ ಕುರಿತು ಸ್ಮರಸಿ ಭಾವುಕರಾದರು. ಇನ್ನು ಮುಂದೆ ಸಾಧ್ಯವಾದಷ್ಟು ದುಡಿದು ಸಮಾಜಕ್ಕೆ ನಾನು ಕೂಡ ನನ್ನಂತೆ ಇರುವ ಅಂಗವಿಕಲರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ರಾಜು ಸೊಂಟಕ್ಕಿ, ರಮೇಶ್ ಹಾದಿಮನಿ, ಶುಭಂ ಶಿರಗವಕರ್, ರಾಹುಲ್ ಕಮ್ಮರ್, ಪ್ರವೀಣ ಹಳಿಯಾಳ, ಕಾಣಪ್ಪ ಪಂಡ್ರೋಳಿ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.