ಸುದ್ದಿ ಕನ್ನಡ ವಾರ್ತೆ
ಮಹಾಲಿಂಗಪುರ: ರಾಜ್ಯ ಬಿಜೆಪಿಯಲ್ಲಿ ಇತ್ತಿಚಿಗೆ ವಯಕ್ತಿಕ ಮಾತು ಕಥೆಗಳಿಂದಾಗಿ ನಡೆಯುತ್ತಿರುವ ಎಲ್ಲಾ ಗೊಂದಲ-ಭಿನ್ನಾಭಿಪ್ರಾಯಗಳು ಶೀಘ್ರ ಬಗೆಹರಿಯಲಿವೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು, ವಿಧಾನ ಪರಿಷತ್ ಸದಸ್ಯರು, ಅಪ್ಪಟ ಹಿಂದುತ್ವವಾದಿ ಸಿ.ಟಿ.ರವಿ ಹೇಳಿದರು.
ಪಟ್ಟಣದ ಬಿಜೆಪಿ ನೇಕಾರ ರಾಜ್ಯ ಮುಖಂಡ ಮನೋಹರ ಶಿರೋಳ ಅವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಟೋತ್ಸವ ಮತ್ತು ಬೆಳ್ಳಿರಥೋತ್ಸವ ಕಾರ್ಯಕ್ರಮದ ನಿಮಿತ್ಯ ರವಿವಾರ ಮನೋಹರ ಶಿರೋಳ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಎಲ್ಲೇ ಹೋದರೂ ಕಾರ್ಯಕರ್ತರಿಂದ ಹಲವು ಪ್ರಶ್ನೆಗಳು ಬರುತ್ತಿವೆ. ಅವರಿಗೆ ಉತ್ತರಿಸಲಾಗದೇ ಇರುವಂತಹ ಅಸಾಯಕತೆ ಕಾಡುತ್ತಿದೆ. ಹೋರಾಟ ಹಿನ್ನಲೆ ಬಂದವರಿಗೆ ಎಂದೂ ಈ ತರಹದ ಅಸಹಾಯಕತೆ ಕಾಡಿಲ್ಲ. ನಮ್ಮ ಒಳಗಿನ ಪ್ರಶ್ನೆಗಳಿಗೆ ಉತ್ತರಿಸುವದು ಕಷ್ಟವಾಗುತ್ತಿದೆ.
ನಾನು ಜಾಗದಲ್ಲಿ ನಾವು ಬರಬೇಕು. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜಕಾರಣ ಮಾಡಿದರೆ ಜನ ಖಂಡಿತಾ ಅಧಿಕಾರದ ಗದ್ದುಗೆ ಏರಿಸುತ್ತಾರೆ. ಅಧಿಕ್ಕಾರಕ್ಕೆ ಏರಿಸುವವರು ಆವರೇ, ಇಳಿಸುವವರೇ ಅವರೇ. ಅದನ್ನು ಮರೆಯಬಾರದು. ರಾಜ್ಯದ ಜನ ಈಗಾಗಲೇ ಸೋಲಿನ ಪಾಠ ಕಲಿಸಿದ್ದಾರೆ. ಒಬ್ಬ ರಾಜಕೀಯ ಕಾರ್ಯಕರ್ತನಿಗೆ ಸೋಲಿನ ಪಾಠ ಕಲಿಸದಿದ್ದರೆ, ರಾಜಕೀಯದಲ್ಲಿ ಯಾವುದರಿಂದಲೂ ಪಾಠ ಕಲಿಯಲು ಸಾಧ್ಯವಿಲ್ಲ.
ಎಲ್ಲರಿಗೂ ವಿನಂತಿಸುವದಿಷ್ಟೆ ಸಿದ್ದಾಂತಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎನ್ನುವದನ್ನು ಮರೆಯಬಾರದು. ನಾನು ಎನ್ನು ಜಾಗದಲ್ಲಿ ನಾವು ಅಂದುಕೊಂಡು ನಮ್ಮ ಪಕ್ಷಕ್ಕೆ ಅಧಿಕಾರ ಬರುವದಕ್ಕಾಗಿ ಹೋರಾಟ ಮಾಡೋಣ. ಅವರವರ ಭಾಗ್ಯದಲ್ಲಿ ಇರುವದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಅವರವರ ಭಾಗ್ಯದಲ್ಲಿ ಏನು ಬರೆದಿದೆ ಅದು ಬಂದೆ ಬರುತ್ತದೆ. ನಾನು ಎಂದವರು ಎಂದಿಗೂ ನಾಯಕರಾಗಿಲ್ಲ. ನಾವು ಎಂದವರು ಮಾತ್ರ ಜನ ಮತ್ತು ಕಾರ್ಯಕರ್ತರು ಬೆಳೆಸಿದ್ದಾರೆ. ಆ ಹಿನ್ನಲೆಯಲ್ಲಿ ನಾವೇಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ.
ನಾನು ವಯಕ್ತಿಯವಾಗಿ ಯಾರ ಒಬ್ಬರ ಕುರಿತು ಹೇಳುತ್ತಿಲ್ಲ. ನನಗೆ ನಾನೇ ಹೇಳಿಕೊಳ್ಳುತ್ತಿರುವ ಮತ್ತು ನನ್ನೊಳಗಿನ ಪ್ರಶ್ನೆಗಳಿಗೆ ನಾನು ಕಂಡುಕೊಂಡ ಉತ್ತರವಾಗಿದೆ. ಸಾಂದರ್ಭಿಕವಾಗಿ ನಾನು ಅವರಿಗೆ, ಇವರಿಗೆ ಹೇಳಿದ್ದೇನೆ ಅಂತಾ ಯಾರು ತಪ್ಪು ಭಾವಿಸಬಾರದು. ಸಾಮಾನ್ಯವಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದರು.
ಬೆಳ್ಳಿ ರಥೋತ್ಸವದಲ್ಲಿ ಭಾಗಿ :
ಮಹಾಲಿಂಗೇಶ್ವರ ಜಟೋತ್ಸವ ಮುನ್ನ ಮನೋಹರ ಶಿರೋಳ ಕುಟುಂಬದಿಂದ ಜರುಗಿದ ಬೆಳ್ಳಿ ರಥೋತ್ಸವ ಮತ್ತು ಮಹಾಲಿಂಗೇಶ್ವರ ದರ್ಶನ ಪಡೆದುಕೊಂಡು ಮಹಾಪೂಜೆಯಲ್ಲಿ ಭಾಗವಹಿಸಿ ಬೆಳ್ಳಿರಥ ಎಳೆದರು. ನಂತರ ದೇವಸ್ಥಾನದ ಗೋಮಾತೆಗೆ ಹಣ್ಣು ತಿನ್ನಿಸಿ ನಮಸ್ಕರಿಸಿದರು. ಮಹಾಲಿಂಗೇಶ್ವರ ಪೀಠಾಧಿಪತಿಗಳು ಹಾಗೂ ಮನೋಹರ ಶಿರೋಳ ಸಹೋದರರಿಂದ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮನೋಹರ ಶಿರೋಳ ಅವರ ಆವ್ಹಾನದ ಮೇರೆಗೆ ಮಹಾಲಿಂಗಪುರಕ್ಕೆ ಬಂದು ಪವಾಡ ಪುರುಷ ಮಹಾಲಿಂಗೇಶ್ವರ ದರ್ಶನ ಮಾಡಿ ಬೆಳ್ಳಿ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹಳ ಸಂತೋಷವಾಗಿದೆ. ಮಹಾಲಿಂಗೇಶ್ವರರು ಸರ್ವರಿಗೂ ಒಳ್ಳೆಯದು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಮನೋಹರ ಶಿರೋಳ, ವಿರೇಶ ಶಿರೋಳ, ಸಂತೋಷ ಶಿರೋಳ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬದಾಮಿ ಮಾಜಿ ಎಂ.ಕೆ.ಪಟ್ಟಣಶೆಟ್ಟಿ, ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ಬಾಗಲಕೋಟೆ ಅಧ್ಯಕ್ಷ ಶಾಂತಗೌಡ ಪಾಟೀಲ, ಸಿ.ಟಿ.ಉಪಾಧ್ಯಾಯ, ಚಂದ್ರಶೇಖರ ಕವಟಗಿ, ಡಾ.ವಿಜಯಲಕ್ಷ್ಮೀ ತುಂಗಳ, ಶಶಿಕಾಂತ ವಿಶ್ವಬ್ರಾಹ್ಮಣ, ರಾಜು ಟಂಕಸಾಲಿ, ಡಾ.ದಯಾನಂದ ಶಿರೋಳ ಸೇರಿದಂತೆ ಬಾಗಲಕೋಟೆ, ತೇರದಾಳ, ಜಮಖಂಡಿ, ಮುಧೋಳ, ಮಹಾಲಿಂಗಪುರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.