ಸುದ್ದಿ ಕನ್ನಡ ವಾರ್ತೆ
ಚಿಕ್ಕಮಗಳೂರು :ಕಾಫಿನಾಡ ಕಳಸದಲ್ಲಿ ಕಾಡ್ಗಿಚ್ಚಿಗೆ ಅರಣ್ಯ ಸುಟ್ಟು ಕರಕಲಾಗಿದೆ.ಕಾಡ್ಗಿಚ್ಚಿನ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳಸ ತಾಲೂಕಿನ ಆನೆಗುಡ್ಡ ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿತ್ತು. ಈ ಘಟನೆಯಲ್ಲಿ ಹತ್ತಾರು ಎಕರೆ ಅರಣ್ಯ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದ ಪರಿಣಾಮ ಬೆಂಕಿ ನಂದಿಸಲು ಅಧಿಕಾರಿಗಳ ಹರಸಾಹಸಪಟ್ಟಿದ್ದಾರೆ.
ಈ ಭೀಕರ ಘಟನೆಯಿಂದಾಗಿ ಗುಡ್ಡದ ಒಂದು ಭಾಗ ಹಸರಿನಿಂದ ಕೂಡಿದ್ದು, ಮತ್ತೊಂದು ಭಾಗ ಸಂಪೂರ್ಣ ಒಣಗಿ ನಿಂತಿದೆ.
ಪ್ರವಾಸಿಗರು, ಜನರೇ ಹೋಗದ ಜಾಗದಲ್ಲಿ ಹೇಗೆ ಬೆಂಕಿ ಹತ್ತಿದೆ ಅನ್ನೋ ಅನುಮಾನ ಮೂಡಿಸಿದೆ.
ಬಿಸಿಲ ಧಗೆಗೆ ಬೆಂಕಿ ಹೊತ್ತಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.