ಸುದ್ದಿ ಕನ್ನಡ ವಾರ್ತೆ

ಬೆಂಗಳೂರು: ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡುವ ಪೋಟೊಗಳನ್ನು ಹಂಚಿಕೊಂಡಿದ್ದಕ್ಕೆ ಪ್ರಶಾಂತ ಸಂಬರ್ಗಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ನಟ ಪ್ರಕಾಶ್ ರೈ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಾರೆ.
ನಟ ಪ್ರಕಾಶ ರೈ ರವರು ಪ್ರಸಕ್ತ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂಬಂತೆ ಕಾಣುವ ಪೋಟೊವನ್ನು ಕೃತಕವಾಗಿ ಸೃಷ್ಠಿಸಿದ್ದು ಈ ಪೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಟ ಪ್ರಕಾಶ ರೈ ರವರ ಪೋಟೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದ ಪ್ರಶಾಂತ ಸಂಬರ್ಗಿ -ಪ್ರಸಕ್ತ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಟ ಪ್ರಕಾಶ ರೈ ಮಿಂದೆದ್ದಿದ್ದರು, ಅವರ ಪಾಪಗಳನ್ನು ಮನ್ನಿಸಲಾಗುತ್ತದೆ, ಪಾಪ ಕಳೆಯುತ್ತದೆಎಂಬ ಆಶಾಭಾವನೆ ಇದೆ ಎಂದು ಬರೆದುಕೊಂಡಿದ್ದರು.

ಪ್ರಶಾಂತ ಸಂಬರ್ಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ ಮಾಡಿರುವ ಬಗ್ಗೆ ನಟ ಪ್ರಕಾಶ ರೈ -“ಸುಳ್ಳು ಸುದ್ಧಿ,ಸುಳ್ಳುರಾಜ” ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ಧಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ. ಪೋಲಿಸ್ ದೂರು ನೀಡಲಾಗಿದೆ. ಕೋರ್ಟ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೊಣ ಎಂದು ಪ್ರಕಾಶ ರೈ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.